ಕರ್ನಾಟಕ

karnataka

ETV Bharat / city

ಕುಂದಗೋಳ ಕ್ಷೇತ್ರದ ಉಪ ಚುನಾವಣೆ... ಕೈ ನಲ್ಲಿ 19, ಶಿವಳ್ಳಿ ಕುಟುಂಬದಲ್ಲೇ ‌ಇಬ್ಬರು ಆಕಾಂಕ್ಷಿಗಳು!

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರ- ಉಪಚುನಾವಣೆಗೆ ದಿನಾಂಕ ಫಿಕ್ಸ್​-ಕಾಂಗ್ರೆಸ್​ನಿಂದ ಸ್ಪರ್ಧಿಸಲು 19 ಜನ, ಶಿವಳ್ಳಿ ಕುಟುಂಬದಲ್ಲೇ ಇಬ್ಬರು ಆಕಾಂಕ್ಷಿಗಳಿಂದ ಅರ್ಜಿ

By

Published : Apr 25, 2019, 12:00 PM IST

ಸಿ.ಎಸ್ ಶಿವಳ್ಳಿ

ಹುಬ್ಬಳ್ಳಿ:ಪೌರಾಡಳಿತ ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರದ ಉಪಚುನಾವಣೆ ಅಖಾಡಕ್ಕಿಳಿಯಲು ತೀವ್ರ ಪೈಪೋಟಿ ನಡೆದಿದೆ. ಕಾಂಗ್ರೆಸ್​ನಿಂದ ಸ್ಪರ್ಧಿಸಲು 19 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.

ಶಿವಳ್ಳಿಯವರ ಪತ್ನಿ, ಸಹೋದರ ಸೇರಿದಂತೆ ಒಟ್ಟು 19 ಮಂದಿ ಅರ್ಜಿ ಸಲ್ಲಿಸಿದ್ದಾರೆ. ‌ಅರ್ಜಿಗಳನ್ನು ಕೆಪಿಸಿಸಿ ಕಚೇರಿಗೆ ಕಳುಹಿಸಲಾಗಿದ್ದು, ಇಂದು ರಾತ್ರಿ ವೇಳೆಗೆ ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ. ಶಿವಳ್ಳಿಯವರ ಪತ್ನಿ ಕುಸುಮ ಶಿವಳ್ಳಿಗೆ ಟಿಕೆಟ್ ಫೈನಲ್ ಎನ್ನಲಾಗುತ್ತಿದೆ. ಅನುಕಂಪದ‌ ಆಧಾರದ ಮೇಲೆ‌ ಕ್ಷೇತ್ರ ಉಳಿಸಿಕೊಳ್ಳುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗ್ತಿದೆ.

ಒಂದೇ ಕುಟುಂಬದಲ್ಲಿ ‌ಇಬ್ಬರು ಆಕಾಂಕ್ಷಿಗಳು:

ಉಪಚುನಾವಣೆಗೆ ಕಾಂಗ್ರೆಸ್​ನಿಂದ ಸ್ಪರ್ಧಿಸಲು ಶಿವಳ್ಳಿ‌‌‌ಯವರ ಪತ್ನಿ ಕುಸುಮ ಮಾತ್ರವಲ್ಲದೆ, ಸಿ.ಎಸ್​ ಶಿವಳ್ಳಿ ಅವರ ಸಹೋದರ ಷಣ್ಮುಖ ‌ಕೂಡ ಅರ್ಜಿ‌ ಸಲ್ಲಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಸರಿ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ಅನುಕಂಪದ‌ ಅಲೆಗೆ ಹೆದರಿದ ಪಕ್ಷೇತರರು :

ಕುಂದಗೋಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ‌ ಪ್ರಕ್ರಿಯೆ ಆರಂಭವಾಗಿ ಮೂರು ದಿನಗಳಾಗಿವೆ.‌ ಆದ್ರೆ ಮೂರು ದಿನ‌ ಕಳೆದರೂ ಯಾವ ಪಕ್ಷೇತರರು ನಾಮಪತ್ರ ಸಲ್ಲಿಸಿಲ್ಲ. ಶಿವಳ್ಳಿ ಅಕಾಲಿಕ ನಿಧನದ ಬಳಿಕ ಕಂಡುಬರುವ ಅನುಕಂಪದ‌ ಅಲೆ ಹಾಗೂ ಟಿಕೆಟ್ ಪೈಪೋಟಿ ನೋಡಿದ ಪಕ್ಷೇತರರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಎ. 29 ಉಮೇದುವಾರಿಕೆ ಸಲ್ಲಿಸಲು ಕೊನೆ ದಿನವಾಗಿದೆ.

ABOUT THE AUTHOR

...view details