ಕರ್ನಾಟಕ

karnataka

ETV Bharat / city

ಕುಮಾರೇಶ್ವರ ಬಹುಮಹಡಿ ಕಟ್ಟಡ ದುರಂತಕ್ಕೆ ಎರಡು ವರ್ಷ: ವರದಿ ಬಹಿರಂಗಗೊಳಿಸಲು ಆಗ್ರಹ - ಕುಮಾರೇಶ್ವರ ಬಹುಮಹಡಿ ಕಟ್ಟಡ ದುರಂತ

ಕಟ್ಟಡ ಕುಸಿದ ವೇಳೆ 19 ಜನ ಮೃತಪಟ್ಟಿದ್ದರು. 57ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿದ್ದರು. ಸರ್ಕಾರ ಕೆಲವರಿಗೆ ಮಾತ್ರ ಪರಿಹಾರ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗಾಯಾಳುಗಳಿಗೂ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ.

kumareshwar-multi-storey-building
ಕುಮಾರೇಶ್ವರ ಬಹುಮಹಡಿ ಕಟ್ಟಡ ದುರಂತ

By

Published : Mar 19, 2021, 8:27 PM IST

ಧಾರವಾಡ: ನಗರದ ಕುಮಾರೇಶ್ವರ ಬಹುಮಹಡಿ ಕಟ್ಟಡ ದುರಂತ ಸಂಭವಿಸಿ ಇಂದಿಗೆ ಎರಡು‌ ವರ್ಷ ಕಳೆದಿದೆ. ಈ ಹಿನ್ನೆಲೆ, ಜನಜಾಗೃತಿ ಸಂಘದ ವತಿಯಿಂದ ಮೃತರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಂತಿ ಕೋರಲಾಯಿತು.

ಕುಮಾರೇಶ್ವರ ಬಹುಮಹಡಿ ಕಟ್ಟಡ ದುರಂತ ಪ್ರಕರಣ

ಇದನ್ನೂ ಓದಿ: ಥಿಯೇಟರ್​ಗಳಲ್ಲಿ ಶೇ.100ರಷ್ಟು ಆಸನ ಭರ್ತಿ ಮುಂದುವರಿಕೆ.... ಸಿನಿಮಾ ಮಂದಿಗೆ ಸಿಹಿ ಸುದ್ದಿ ನೀಡಿದ ಸಿಎಂ

ಇದೇ ವೇಳೆ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಸರ್ಕಾರಕ್ಕೆ ನೀಡಿದ ವರದಿ ಬಹಿರಂಗಗೊಳಿಸಲು ಆಗ್ರಹಿಸಿ ಕಟ್ಟಡ ದುರಂತ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಯಿತು.

ಸರ್ಕಾರ ಕೆಲವರಿಗೆ ಮಾತ್ರ ಪರಿಹಾರ ನೀಡಿದ್ದು, ಎಲ್ಲ ಗಾಯಾಳುಗಳಿಗೂ ಪರಿಹಾರ ನೀಡುವಂತೆ ಒತ್ತಾಯಿಸಲಾಯಿತು.

ABOUT THE AUTHOR

...view details