ಧಾರವಾಡ: ಸವದತ್ತಿ ರಸ್ತೆ ಬದಿಯ ಪೈಪ್ಲೈನ್ ಒಡೆದು ಭಾರಿ ಪ್ರಮಾಣದ ನೀರು ಪೋಲಾಗಿದೆ. ನೀರು ಎತ್ತರಕ್ಕೆ ಚಿಮ್ಮುತ್ತಿರೋದನ್ನು ಕಂಡು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು.
ಆದ್ರೆ, ಭಾರಿ ಪ್ರಮಾಣದಲ್ಲಿ ಚಿಮ್ಮುತ್ತಿರುವ ನೀರಿನ ನಡುವೆ ಬಸ್ ಚಲಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ಚಾಲಕ ಎತ್ತರಕ್ಕೆ ಚಿಮ್ಮುತ್ತಿದ್ದ ನೀರಿನಲ್ಲೇ ಸಾಗಿ ಬಂದಿದ್ದು, ಚಾಲಕನ ಧೈರ್ಯಕ್ಕೆ ಸ್ಥಳೀಯರು ಜೈ ಎಂದಿದ್ದಾರೆ.