ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಸ್ವಪಕ್ಷೀಯರ ವಿರುದ್ಧ ಕೊನೆಗೂ ಕೆಪಿಸಿಸಿ ಶಿಸ್ತು ಕ್ರಮ ಜರುಗಿಸಿದೆ.
34 ಜನ ಬಂಡಾಯ ಅಭ್ಯರ್ಥಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿಲಾಗಿದೆ. ಈ ಕುರಿತು ಕೆಪಿಪಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಸೋಮವಾರ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಪಾಲಿಕೆಯ ಐವರು ಮಾಜಿ ಸದಸ್ಯರು ಸಹ ಸೇರಿದ್ದಾರೆ.