ಹುಬ್ಬಳ್ಳಿ:ಕೆಎಲ್‌ಇ ಶಿಕ್ಷಣ ಸಂಸ್ಥೆಯಿಂದ ದೇಶದ್ರೋಹಿ ಆರೋಪಿಗಳನ್ನ ಬಿಡುಗಡೆ ಮಾಡುವಂತೆ ಒತ್ತಡ ಹೇರಿಲ್ಲ. ಅಲ್ಲದೆ ನಾವುದೇ ರೀತಿಯ ಬಾಂಡ್ ಅಥವಾ ಮುಚ್ಚಳಿಕೆ ಪತ್ರ ನೀಡಿಲ್ಲವೆಂದು ಕೆ ಎಲ್ ಇ ಸಂಸ್ಥೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಬಿಡುಗಡೆಗೆ ಬಾಂಡ್ ನೀಡಿಲ್ಲವೆಂದ ಕೆಎಲ್‌ಇ ಸಂಸ್ಥೆ... ಅನುಮಾನ ಮೂಡಿಸಿದ ಹು-ಧಾ ಕಮಿಷನರ್ ಹೇಳಿಕೆ - ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಪ್ರಕರಣ
ಹು-ದಾ ಕಮೀಷನರ್ ಹೇಳಿಕೆ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆ, ಆರೋಪಿಗಳ ಬಿಡುಗಡೆಗಾಗಿ ನಾವು ಯಾವುದೇ ರೀತಿಯ ಬಾಂಡ್ ನೀಡಿಲ್ಲ. ಅಲ್ಲದೆ ದೇಶದ್ರೋಹಕ್ಕೆ ನಾವು ಬೆಂಬಲ ನೀಡಲ್ಲ ಎನ್ನುವ ಮೂಲಕ ಪೊಲೀಸ್ ಆಯುಕ್ತರ ಹೇಳಿಕೆಗೆ ಆಡಳಿತ ಮಂಡಳಿ ತದ್ವಿರುದ್ಧ ಹೇಳಿಕೆ ನೀಡಿದೆ.
ಕೆಎಲ್‌ಇ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ಪ್ರಕರಣ
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ನಾವೇ ಖುದ್ದಾಗಿ ಅವರ ವಿರುದ್ಧ ದೂರು ನೀಡಿದ್ದೇವೆ. ನಮ್ಮ ದೂರಿನ ಮೇಲೆ ಪೊಲೀಸರು ಮೂವರನ್ನ ಬಂಧಿಸಿದ್ದರು. ಆದ್ರೆ ನಾವು ಅವರನ್ನ ಬಿಡುಗಡೆ ಮಾಡುವ ಬಗ್ಗೆ ಮನವಿ ಅಥವಾ ಬಾಂಡ್ ನೀಡಿಲ್ಲ. ದೇಶದ್ರೋಹಿಗಳ ಪರವಾಗಿ ನಮ್ಮ ಸಂಸ್ಥೆ ನಿಲ್ಲೋದಿಲ್ಲ ಎನ್ನುವ ಮೂಲಕ ಪೊಲೀಸ್ ಆಯುಕ್ತರ ಹೇಳಿಕೆಗೆ ಆಡಳಿತ ಮಂಡಳಿ ತದ್ವಿರುದ್ಧ ಹೇಳಿಕೆ ನೀಡಿದೆ.
Last Updated : Feb 17, 2020, 7:55 PM IST