ಹುಬ್ಬಳ್ಳಿ:ಕಳೆದ ವಾರ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ 'ಕವಚ' ಸಿನಿಮಾ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ಶಿವಣ್ಣ ವಿಭಿನ್ನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಜನರು ಇಷ್ಟಪಟ್ಟಿದ್ದಾರೆ.
'ಕವಚ' ಸಿನಿಮಾ ಸಕ್ಸಸ್ ಖುಷಿಯಲ್ಲಿ ಶಿವಣ್ಣ: ಚಿತ್ರ ಪ್ರಚಾರಕ್ಕೆ ಹುಬ್ಬಳ್ಳಿಗೆ ಚಿತ್ರತಂಡ ಭೇಟಿ - undefined
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ 'ಕವಚ' ಸಿನಿಮಾ ಏಪ್ರಿಲ್ 5 ರಂದು ಬಿಡುಗಡೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಪ್ರಚಾರಕ್ಕಾಗಿ ಇಂದು ಚಿತ್ರತಂಡ ಹುಬ್ಬಳ್ಳಿಗೆ ಭೇಟಿ ನೀಡಿತ್ತು.
ಇನ್ನು ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಶಿವರಾಜ್ಕುಮಾರ್, ವಸಿಷ್ಠಸಿಂಹ ಹಾಗೂ ಚಿತ್ರತಂಡ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಶಿವಣ್ಣ ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ನಗರದ ಅಪ್ಸರಾ ಚಿತ್ರಮಂದಿರಕ್ಕೆ ತೆರೆದ ವಾಹನದಲ್ಲಿ ಶಿವಣ್ಣ ಹಾಗೂ ಚಿತ್ರತಂಡವನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಹುಬ್ಬಳ್ಳಿ ಜನರು ಚಿತ್ರತಂಡವನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಡಾ. ಶಿವರಾಜಕುಮಾರ್ ಅಭಿಮಾನಿಗಳು ಪಟಾಕಿ ಸಿಡಿಸಿ, ಕಲಾ ತಂಡದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು. ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಹುಬ್ಬಳ್ಳಿಯಿಂದ ನಾಳೆ ಮತ್ತೆ ಶಿವಮೊಗ್ಗ ಹಾಗೂ ಭದ್ರಾವತಿಗೆ ತೆರಳಿ ಚಿತ್ರದ ಪ್ರಚಾರ ಕಾರ್ಯ ಮುಗಿಸಿ ಶಿವಣ್ಣ ಬೆಂಗಳೂರಿಗೆ ಹೊರಡಲಿದ್ದಾರೆ.