ಕರ್ನಾಟಕ

karnataka

ETV Bharat / city

ಎಂ‌ಎಸ್‌ಎಂಇಗಳಿಗೆ ಯಾವುದೇ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸಲು ಅನುಮತಿಸಿ: ಕಾಸಿಯಾ ಅಧ್ಯಕ್ಷ - ಎಂ‌ಎಸ್‌ಎಂಇ

ಈಗಾಗಲೇ ದೊಡ್ಡ ಪ್ರಮಾಣದ ಪೂರೈಕೆ ಸರಪಳಿ ಅಡ್ಡಿ ಮತ್ತು ರಫ್ತು ಆದೇಶಗಳ ನಷ್ಟದಿಂದ ಎಂಎಸ್‌ಎಂಇಗಳು ದುರ್ಬಲಗೊಂಡಿವೆ. ಈಗ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದಿದ್ದರೆ ಹೆಚ್ಚಿನ ಉದ್ಯೋಗ ನಷ್ಟ ಮತ್ತು ಆರ್ಥಿಕ ನಷ್ಟದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆದಾಯವಿಲ್ಲದಂತಾಗುತ್ತದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಅರಸಪ್ಪ ಅಭಿಪ್ರಾಯಪಟ್ಟಿದ್ದಾರೆ.

Bangalore
ಸಿಎಂ ಭೇಟಿ ಮಾಡಿದ ಕಾಸಿಯಾ ಅಧ್ಯಕ್ಷ ಬಿ.ಅರಸಪ್ಪ

By

Published : May 28, 2021, 9:01 AM IST

ಬೆಂಗಳೂರು:ರಾಜ್ಯದಲ್ಲಿ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಯಾವುದೇ ನಿರ್ಬಂಧ ವಿಧಿಸದೆ ತಕ್ಷಣ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ವ್ಯಾಪಾರ ನಷ್ಟದಿಂದಾಗಿ ಸುಮಾರು 40ರಿಂದ 50% ಘಟಕಗಳು ಶಾಶ್ವತವಾಗಿ ಸ್ಥಗಿತಗೊಳ್ಳಬಹುದಾದ ಸಾಧ್ಯತೆಯಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಅರಸಪ್ಪ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಕಂದಾಯ ಸಚಿವ ಆರ್.ಅಶೋಕ್ ಮತ್ತು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅಧ್ಯಕ್ಷ ಕೆ.ಬಿ.ಅರಸಪ್ಪ ಮನವಿ ಸಲ್ಲಿಸಿ, ಎಂಎಸ್ಎಂಇಗಳು ಕಾರ್ಯಾಚರಣೆ ಪುನರಾರಂಭಿಸುವ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಮಿಕರನ್ನು ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ತಮ್ಮ ಸ್ಥಳೀಯ ಸ್ಥಳಕ್ಕೆ ವಲಸೆ ಹೋಗದಂತೆ ತಡೆಯವ ನಿಟ್ಟಿನಲ್ಲಿ ಸೂಕ್ತ ‌ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ ‌ಸಣ್ಣ ಕೈಗಾರಿಕಾ ವಲಯಕ್ಕೆ ಕಾರ್ಯನಿರ್ವಹಿಸಲು ಅನುಮತಿ ವಿಳಂಬವಾದಷ್ಟು ಇತರ ರಾಜ್ಯಗಳ ಎಂಎಸ್‌ಎಂಇಗಳಿಗಳೊಂದಿಗೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗುವುದಲ್ಲದೆ, ಸ್ಥಳೀಯವಾಗಿ ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಹಾನಿ ಉಂಟಾಗುತ್ತದೆ.

ಈಗಾಗಲೇ ದೊಡ್ಡ ಪ್ರಮಾಣದ ಪೂರೈಕೆ ಸರಪಳಿ ಅಡ್ಡಿ ಮತ್ತು ರಫ್ತು ಆದೇಶಗಳ ನಷ್ಟದಿಂದ ಎಂಎಸ್‌ಎಂಇಗಳು ದುರ್ಬಲಗೊಂಡಿವೆ. ಈಗ ಕೈಗಾರಿಕೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸದಿದ್ದರೆ, ಹೆಚ್ಚಿನ ಉದ್ಯೋಗ ನಷ್ಟ ಮತ್ತು ಆರ್ಥಿಕ ನಷ್ಟದಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆದಾಯವಿಲ್ಲದಂತಾಗುತ್ತದೆ. ಕೋವಿಡ್-19 ಎದುರಿಸುವಲ್ಲಿ ಸರ್ಕಾರವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ‌ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಓದಿ:ರಸ್ತೆಯಲ್ಲಿ ಹೋಗ್ತಿದ್ದ ಯುವತಿ ಮೊಬೈಲ್​ ಕದ್ದ ಕಳ್ಳರು... ಸಿಸಿಟಿವಿ ವಿಡಿಯೋ

ABOUT THE AUTHOR

...view details