ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕರ್ನಾಟಕ ಯುವಸೇನಾ ಪದಾಧಿಕಾರಿಗಳ ಆಯ್ಕೆಯ ಹಿನ್ನೆಲೆಯಲ್ಲಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 40 ಕ್ಕೂ ಹೆಚ್ಚು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ರಕ್ತದಾನ ಮಾಡಿದ ಕರ್ನಾಟಕ ಯುವಸೇನಾ ಕಾರ್ಯಕರ್ತರು - undefined
ನಗರದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 40 ಕ್ಕೂ ಹೆಚ್ಚು ಕರ್ನಾಟಕ ಯುವಸೇನಾ ಕಾರ್ಯಕರ್ತರು ರಕ್ತದಾನ ಮಾಡಿದರು.

ರಕ್ತದಾನ ಮಾಡಿದ ನಂತರ ಮಾತನಾಡಿದ ಕರ್ನಾಟಕ ಯುವಸೇನೆ ರಾಜ್ಯಧ್ಯಾಕ್ಷ ಶ್ರೀನಾಥ್ ಪವಾರ, ರಕ್ತದಾನ ಎಲ್ಲರೂ ಮಾಡಬೇಕು, ರಕ್ತದಾನ ಮಾಡಿದ್ರೆ ಆರೋಗ್ಯವು ಸಹ ರುದ್ಧಿಸುತ್ತದೆ. ಕೆಲವರು ರಕ್ತ ಕೊಟ್ಟರೆ ತಮಗೆ ಏನಾದ್ರು ಸಮಸ್ಯೆ ಆಗತ್ತೆ ಎನ್ನುವ ಭಯದಲ್ಲಿ ಇರುತ್ತಾರೆ, ಭಯ ಪಡುವ ಅವಶ್ಯಕತೆ ಇಲ್ಲ, ರಕ್ತದಾನದಿಂದ ಹಲವಾರು ರೋಗಿಗಳ ಜೀವ ಉಳಿಸಬಹುದು. ರಕ್ತ ಕ್ರಿಯೆ ಅನ್ನುವುದು ಮುಗಿಯುವಂತದಲ್ಲ, ಆದ್ದರಿಂದ ಎಲ್ಲರೂ ರಕ್ತದಾನ ಮಾಡಿ ಎಂದು ಕರೆ ಕೊಟ್ಟರು.
ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕೂಡ ಸಾರ್ವಜನಿಕರ ಸೇವೆಗೆ ಕರ್ನಾಟಕ ಯುವ ಸೇನೆ ರಾಜ್ಯಾದ್ಯಂತ ಸೇವೆ ಸಲ್ಲಿಸಲು ಸಿದ್ಧವಾಗಿದೆ ಎಂದು ಯುವ ಸೇನೆ ಮುಖಂಡರು ತಿಳಿಸಿದರು. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ಕಾರ್ಯಕರ್ತರಿಗೆ ರಾಷ್ಟ್ರೋತ್ಥಾನ ರಕ್ತನಿಧಿಯವರು ಅಭಿನಂದನೆ ಸಲ್ಲಿಸಿ, ಸಾರ್ವಜನಿಕ ಕಷ್ಟಗಳಿಗೆ ಸ್ಪಂದಿಸುವಲ್ಲಿ ಇಂತಹ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಆಶಯ ವ್ಯಕ್ತಪಡಿಸಿದರು.