ಕರ್ನಾಟಕ

karnataka

ETV Bharat / city

ಕಾನೂನು ವಿಶ್ವ ವಿದ್ಯಾಲಯದ ನಕಲಿ ಚೆಕ್ ಸೃಷ್ಟಿ ಲಕ್ಷ ಲಕ್ಷ ಕೊಳ್ಳೆ ಹೊಡೆದ ಖದೀಮರು - ಕಾನೂನು ವಿಶ್ವವಿದ್ಯಾಲಯ ನಕಲಿ ಚೆಕ್​ ಪ್ರಕರಣ

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಕಲಿ ಚೆಕ್ಕುಗಳನ್ನು ತಯಾರಿಸಿ ಅವುಗಳಿಗೆ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಗಳ ನಕಲಿ ಸಹಿ ಮಾಡಿ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಯಿಂದ ಒಟ್ಟು 22, 88, 750 ರೂ. ಗಳನ್ನು ಡ್ರಾಮಾಡಿಕೊಂಡ ಘಟನೆ ಜರುಗಿದೆ.

Karnataka State Law College Fake Check case
ಕಾನೂನು ವಿಶ್ವ ವಿದ್ಯಾಲಯ

By

Published : Feb 13, 2020, 10:03 PM IST

ಹುಬ್ಬಳ್ಳಿ :ನಕಲಿ ಚೆಕ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನಕಲಿ ಚೆಕ್ಕುಗಳನ್ನು ತಯಾರಿಸಿ ಅವುಗಳಿಗೆ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಗಳ ನಕಲಿ ಸಹಿ ಮಾಡಿ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಯಿಂದ ದಿನಾಂಕ 21-01-2020 ರಿಂದ ದಿನಾಂಕ: 12-02-2020ರ ವರೆಗೆ ಒಟ್ಟು 22, 88, 750 ರೂ. ಗಳನ್ನು ಡ್ರಾಮಾಡಿಕೊಂಡಿದ್ದಾರೆ. ಈ ಕುರಿತು ಸಹಾಯಕ ಕುಲಸಚಿ ರಂಗಸ್ವಾಮಿ ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಹು-ಧಾ ಮಹಾನಗರ ಪೊಲೀಸ ಆಯುಕ್ತ ಆರ್. ದೀಲಿಪ್, ನಕಲಿ ಚೆಕ್ ಸೃಷ್ಟಿಸಿ ವಂಚನೆ ಮಾಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details