ಹುಬ್ಬಳ್ಳಿ: ನವಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಸ್ತುತ ಪಡಿಸುತ್ತಿರುವ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2021ನ್ನು ಮೇ 21, 22, 23 ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ್ ಹೇಳಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹೆಬ್ಬಾಗಿಲು ಆಗಿರುವ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ಇಂತಹ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುವಂತಾಗಬೇಕು, ಅಂದಾಗ ಮಾತ್ರ ಚಿತ್ರೋದ್ಯಮ ಬೆಳೆಯಲು ಸಾಧ್ಯ ಎಂದರು.
ಮೇ 21, 22, 23 ರಂದು ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಚಲನಚಿತ್ರ ಹಾಗೂ ಕಿರುಚಿತ್ರ ಪ್ರದರ್ಶನ ಕೂಡ ಹಮ್ಮಿಕೊಳ್ಳಲಾಗಿದೆ. 2-3 ವರ್ಷದಿಂದ ನಾನು ಗೋವಾಗೆ ಹೋಗುತ್ತಿಲ್ಲ. ಮಹದಾಯಿ ವಿಚಾರದಲ್ಲಿ ಗೋವಾ ತಡೆ ನೀಡಿರುವ ಹಿನ್ನೆಲೆಯಲ್ಲಿ ನಾನು ಅಲ್ಲಿನ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಹೋಗುತ್ತಿಲ್ಲ. ಅದು ಆ ಭಾಗದ ಜನರಿಗೆ ಮಾತ್ರ ಸೀಮಿತವಾಗಿದೆ. ಈ ಬಾರಿಯ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಈ ಭಾಗದಲ್ಲಿ ಖಾಸಗಿ ಚಲನಚಿತ್ರ ನಗರಿಯನ್ನು ಮಾಡಬೇಕು ಎನ್ನುವ ಆಸೆ ಚಿಗುರಿದೆ. ಫಿಲ್ಮ್ ಫೆಸ್ಟಿವಲ್ ಈ ಭಾಗದಲ್ಲಿ ಮಾಡುವುದರಿಂದ ಜನರಿಗೆ ಚಲನಚಿತ್ರದ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದರು.
ನಾವು ಸಹ ಚಲನಚಿತ್ರ ನಗರಿಯನ್ನು ಮಾಡಬೇಕು ಅಂತ ಸಿಎಂಗೆ ಮನವಿ ಮಾಡಿದ್ದೆವು. ಕಳೆದ ಬಾರಿ 500 ಕೋಟಿ ಮೀಸಲಿಟ್ಟಿದ್ದರು. ಆದರೆ, ಈ ಬಾರಿಯ ಬಜೆಟ್ನಲ್ಲಿ ಶೂನ್ಯ ಅನುದಾನ ಸಿಕ್ಕಿದೆ. ನಾವು ಹೃದಯ ಶ್ರೀಮಂತರು, ಎಲ್ಲ ಭಾಷೆ ಚಿತ್ರವನ್ನು ನೋಡುತ್ತೇವೆ. ಆದರೆ, ನಮ್ಮ ಭಾಷೆಯನ್ನು ಬೇರೆಯವರು ನೋಡುವುದಿಲ್ಲ. ಹೀಗಾಗಿ ನನಗೆ ಬಹಳ ಬೇಸರವಾಗಿದೆ ಎಂದರು.
ಬಳಿಕ ಫಿಲ್ಮ್ ಫೆಡರೇಷನ್ ಉಪಾಧ್ಯಕ್ಷ ಸುರೇಶ ಕುಮಾರ್ ಮಾತನಾಡಿ, ಮುಂಬೈ ಕರ್ನಾಟಕವು ಕನ್ನಡ ಫಿಲ್ಮ್ ಇಂಡಸ್ಟ್ರಿಯ ಬ್ಯಾಕ್ ಬೋನ್ ಎಂದು ಮುಂಬೈ ಕರ್ನಾಟಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.