ಕರ್ನಾಟಕ

karnataka

ETV Bharat / city

ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಸ್ವಾಭಿಮಾನ ಬಣ ಕಾರ್ಯಕರ್ತರ ಪ್ರತಿಭಟನೆ - ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ

ಕರ್ನಾಟಕ ರಾಜ್ಯದಲ್ಲಿ ಕೊರಚ, ಕೊರಮ, ಭಜಂತ್ರಿ, ಭೋವಿವಡ್ಡರ,ಲಂಬಾಣಿ ಜನಾಂಗದ 1 ಕೋಟಿಗೂ ಹೆಚ್ಚು ಜನರಿದ್ದು, ಇವರನ್ನ ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ಆರೋಪಿಸಿದ್ದಾರೆ.

Karnataka Defense Forum Self-Esteem Activists protest
ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಸ್ವಾಭಿಮಾನ ಬಣ ಕಾರ್ಯಕರ್ತರ ಪ್ರತಿಭಟನೆ

By

Published : Jun 1, 2020, 10:51 PM IST

ಹುಬ್ಬಳ್ಳಿ:ಕೊರಚ , ಕೊರಮ, ಭಜಂತ್ರಿ, ಭೋವಿವಡ್ಡರ ,ಲಂಬಾಣಿ ಜನಾಂಗದವರನ್ನ ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂದು ಕೆಲವರು ಷಡ್ಯಂತ್ರ ಮಾಡುತ್ತಿರುವುದನ್ನ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಸ್ವಾಭಿಮಾನ ಬಣ ಕಾರ್ಯಕರ್ತರ ಪ್ರತಿಭಟನೆ

ನಗರದ ತಹಶೀಲ್ದಾರ್​ ಕಚೇರಿ ಎದುರು ಪ್ರತಿಭಟಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಕೊರಚ, ಕೊರಮ, ಭಜಂತ್ರಿ, ಭೋವಿವಡ್ಡರ,ಲಂಬಾಣಿ ಜನಾಂಗದ 1 ಕೋಟಿಗೂ ಹೆಚ್ಚು ಜನರಿದ್ದು, ಇವರನ್ನ ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ. ಆದರೆ, ನಿಜವಾಗಿಯೂ ಈ ಸಮುದಾಯಗಳು ಶೈಕ್ಷಣಿಕ, ಆರ್ಥಿಕ,ಸಾಮಾಜಿಕವಾಗಿ ಹಿಂದುಳಿದಿವೆ.

ಆದರೂ ಸಹ ಕಳೆದ ಹತ್ತು ವರ್ಷಗಳಿಂದ ಕೆಲವರು ಈ ಜನಾಂಗಗಳನ್ನ ಎಸ್​ಸಿ ಪಟ್ಟಿಯಿಂದ ಹೊರಗಿಡುವಂತೆ ಸದಾಶಿವ ಆಯೋಗದ ವರದಿ ಜಾರಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಇದನ್ನ ರಾಜ್ಯದ ಕಾರ್ಯದರ್ಶಿಗಳು ವಜಾ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್​ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ABOUT THE AUTHOR

...view details