ಹುಬ್ಬಳ್ಳಿ: ವೆರೂನಿಕಾ ಠಾಕೂರ್ ಪ್ರೊಡಕ್ಷನ್ ಅರ್ಪಿಸುವ ತಮ್ಮ'ಕರಣ್ ಅಬೋವ್' ಆಲ್ಬಂ ನಾಳೆ ಸಂಜೆ 6ಕ್ಕೆ ಟಿ-ಸೀರಿಸ್ ಹಾಗೂ ಲಹರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಿಂಗರ್ ಕರಣಸಿಂಗ್ ಠಾಕೂರ್ ತಿಳಿಸಿದರು.
ನಾಳೆ 'ಕರಣ್ ಅಬೋವ್' ಆಲ್ಬಂ ಸಾಂಗ್ ಅನಾವರಣ - undefined
ಕರಣಸಿಂಗ್ ಠಾಕೂರ್ ಹಾಡಿ, ಅಭಿನಯಸಿರುವ 'ಕರಣ್ ಅಬೋವ್' ಆಲ್ಬಂ ಸಾಂಗ್ಗಳು ಇದೇ 5ರಂದು ಸಂಜೆ 6 ಗಂಟೆಗೆ ಅನಾವರಣಗೊಳ್ಳಲಿವೆ.
ನಗರದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಅವರು, ಮಂಜು ನಂದನ್ ನಿರ್ದೇಶನ ಮಾಡಿರುವ ಹಾಡುಗಳನ್ನು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ. ಇದು ನಾನು ಹಾಡಿ, ಅಭಿನಯಿಸಿರುವ ಎರಡನೇ ಆಲ್ಬಂ ಆಗಿದ್ದು, ಇದರಲ್ಲಿ ನಾಲ್ಕು ಹಾಡುಗಳಿವೆ. ಮೊದಲಿನದ್ದು ಇಂಗ್ಲಿಷ್ ಹಾಡು 'ಯು ಗಾಟ್ ಮಿ ಕ್ರೇಜಿ', ನಂತರದಲ್ಲಿ ರೆಹನಾ ತಾ, ಲಮ್ಹಾ ಲಮ್ಹಾ ಎಂಬ ಹಾಡು ಸೇರಿದಂತೆ ಒಂದು ಪಾಲಕರ ಮಹತ್ವ ಸಾರುವ ಗೀತೆಯಿದೆ ಎಂದು ಮಾಹಿತಿ ಹಂಚಿಕೊಂಡ್ರು. ಇದೇ ವೇಳೆ ಮಾತನಾಡಿದ ಬೇಬಿ ಶ್ರೀ ತನನ್, ನಟನೆ ಮಾಡಲು ಅವಕಾಶ ಸಿಕ್ಕಿದೆ. ಈ ಅಲ್ಬಂನಲ್ಲಿ ಅಭಿನಯಿಸಿದ್ದು ತುಂಬಾ ಖುಷಿ ತಂದಿದೆ ಎಂದಳು.
ಈ ಸಾಂಗ್ಗಳಿಗೆ ಪ್ರವೀಣ್ ಪ್ರಾಂಶಿಸ್ ಅವರ ಸಂಗೀತವಿದ್ದು, ಮಂದಾರ ಪಾಠಕ್, ರಿಷಭ್ ವಿನಯ, ಫಾತಿಮಾರಾಜ್ ಕಿಲಿಮಸ್ ಸಾಹಿತ್ಯವಿದೆ. ಈ ಆಲ್ಬಂ ಹಾಡುಗಳು ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿವೆ ಎಂದು ತಂಡ ಹೇಳಿಕೊಂಡಿತು.