ಕರ್ನಾಟಕ

karnataka

ETV Bharat / city

ನಾಡಿನಾದ್ಯಂತ 64ನೇ ಕನ್ನಡ ರಾಜ್ಯೋತ್ಸವ...ಧಾರವಾಡ,ಕಾರವಾರದಲ್ಲಿ ಸಂಭ್ರಮ - ಕನ್ನಡ ರಾಜ್ಯೋತ್ಸವ ಸುದ್ದಿ

64ನೇ ಕನ್ನಡ ರಾಜ್ಯೋತ್ಸವನ್ನು ಧಾರವಾಡ,ಉತ್ತರಕನ್ನಡ ಜಿಲ್ಲೆಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಧಾರವಾಡ,ಕಾರವಾರದಲ್ಲಿ ಸಂಭ್ರಮ

By

Published : Nov 1, 2019, 12:43 PM IST

ಧಾರವಾಡ/ಉತ್ತರಕನ್ನಡ: 64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರವಾಡ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್​,ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಧ್ವಜಾರೋಹಣ ನೆರವೇರಿಸಿದರು.

ಧಾರವಾಡ,ಕಾರವಾರದಲ್ಲಿ ಸಂಭ್ರಮ

ಈ ವೇಳೆ ರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಮೊದಲ ಬಹುಮಾನವನ್ನ ಧಾರವಾಡ ಬಾಲಕಿಯರ ಪ್ರೌಢಶಾಲೆ ಪಡೆದುಕೊಂಡಿತು. ಎರಡನೇ ಸ್ಥಾನವನ್ನು ನವೋದಯ ವಿದ್ಯಾಲಯ ಪಡೆದುಕೊಂಡರೇ,ಬಾಸೆಲ್ ಮಿಷನ್ ಬಾಲಕರ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಇನ್ನು, ಉತ್ತರಕನ್ನಡ ಜಿಲ್ಲೆಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ನಂತರ ಪೊಲೀಸ್ ಇಲಾಖೆ,ಎನ್‌ಸಿಸಿ ಹಾಗೂ ವಿವಿಧ ಶಾಲೆಯ ಮಕ್ಕಳು ಸೇರಿದಂತೆ 13 ತಂಡಗಳಿಂದ ಆಕರ್ಷಕ ಪಥಸಂಚಲನವನ್ನು ನಡೆಸಲಾಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕನ್ನಡ ರಾಜ್ಯೋತ್ಸವ ಸಂದೇಶವನ್ನ ನೀಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 100 ದಿನಗಳನ್ನ ಪೂರೈಸುತ್ತಿರುವ ಬೆನ್ನಲ್ಲೆ, ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಕನ್ನಡ ಬೆಳವಣಿಗೆಗೆ ಸರ್ಕಾರದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.

ನೆರೆಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರವನ್ನ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದರು.

ABOUT THE AUTHOR

...view details