ಧಾರವಾಡ :ಕೊರೊನಾ ವೈರಸ್‌ನಿಂದ ಕಲಬುರ್ಗಿಯಲ್ಲಿ ವೃದ್ಧನ ಸಾವಾಗಿದೆ. ಸರ್ಕಾರ ಕೇವಲ ರಜೆ ನೀಡುವುದಲ್ಲದೇ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.
ಕೊರೊನಾ ಬಗ್ಗೆ ಮೊದಲೇ ಮುಂಜಾಗ್ರತಾ ಕ್ರಮಕೈಗೊಳ್ಬೇಕಿತ್ತು.. ಬಸವರಾಜ ಹೊರಟ್ಟಿ - ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ
ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ಒಳ್ಳೆಯದು. ಆದರೆ, ರಜೆ ನೀಡುವುದೊಂದೇ ಆಗದು, ಅದರ ಹೊರತಾಗಿ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಕೊರೊನಾದಿಂದ ಕಲಬುರಗಿಯಲ್ಲಿ ವೃದ್ದ ಸಾವು, ಮುಂಜಾಗೃತ ಕ್ರಮ ಕೈಗೊಳ್ಳಬೇಕಿತ್ತು: ಬಸವರಾಜ ಹೊರಟ್ಟಿ
ಕಲಬುರ್ಗಿ ಕೊರೊನಾ ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿ ಬೇರೆ ದೇಶದಿಂದ ಬಂದಿದೆ. ಮೊದಲೇ ಸರಿಯಾಗಿ ಚೆಕ್ ಮಾಡಬೇಕಿತ್ತು ಎಂದರು. ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವುದು ಒಳ್ಳೆಯದು. ಆದರೆ, ರಜೆ ನೀಡುವುದೊಂದೇ ಆಗದು, ಅದರ ಹೊರತಾಗಿ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.