ಹುಬ್ಬಳ್ಳಿ :ಒಂದು ರಾಜಕೀಯ ಪಕ್ಷ ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಎಂದು ರೂಲ್ಸ್ ಇದೆಯಾ ಎಂದು ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕಾಂಗ ಪಕ್ಷದ ನಾಯಕರು ಟ್ವೀಟ್ ಮೂಲಕ ಹೇಳಿದ ಮೇಲೆ ಸತ್ಯ ಅಲ್ವಾ?. ಕ್ಯಾಸಿನೊಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಹೋಗಿದ್ದರು ಎಂದರು.
ಕ್ಯಾಸಿನೊ ಪ್ರವಾಸ ಕುರಿತು ಮಾಜಿ ಶಾಸಕ ಕೋನರೆಡ್ಡಿ ಹೇಳಿಕೆ ರಾಜಕೀಯ ಚರ್ಚೆ ಮಾಡಲು ಕ್ಯಾಸಿನೊಗೆ ಹೋಗಿದ್ದು ನಿಜ. ಒಂದು ಬಾರಿ ಪ್ರವಾಸ ರದ್ದಾಗಿತ್ತು. ಇನ್ನೊಮ್ಮೆ ಎಲ್ಲರೂ ಹೋಗಿದ್ದು ಸತ್ಯ. ಒಂದು ರಾಜಕೀಯ ಪಕ್ಷ ಕ್ಯಾಸಿನೊದಲ್ಲಿ ರಾಜಕೀಯ ಚರ್ಚೆ ಮಾಡಬಾರದು ಅಂತಾ ರೂಲ್ಸ್ ಇದೆಯಾ ಎಂದು ಪ್ರಶ್ನಿಸಿದರು.
ನಾನು ಶಾಸಕನಾದ ವೇಳೆ ಜೆಡಿಎಸ್ ಶಾಸಕರು ಕ್ಯಾಸಿನೊಗೆ ಪ್ರವಾಸ ಹೋಗಿದ್ದು ನಿಜ. ಆಗ ನನಗೂ ಕರೆದರೂ ನಾನು ಹೋಗಿರಲಿಲ್ಲ. ನಾನು ನನ್ನ ಕ್ಷೇತ್ರದಲ್ಲೇ ಉಳಿದಿದ್ದೆ ಎಂದು ತಿಳಿಸಿದರು.