ಕರ್ನಾಟಕ

karnataka

ETV Bharat / city

ಕಾಂಗ್ರೆಸ್​ನವರ ಕುಮ್ಮಕ್ಕಿನಿಂದ ರೈತರು ರ‍್ಯಾಲಿ ನಡೆಸುತ್ತಿದ್ದಾರೆ: ಜಗದೀಶ್ ಶೆಟ್ಟರ್ - Jagdish Shetter news

ರೈತರು ನಾಳೆ ಬೃಹತ್​ ಟ್ರ್ಯಾಕ್ಟರ್​ ರ‍್ಯಾಲಿ ನಡೆಸುತ್ತಿರುವುದು ಕಾಂಗ್ರೆಸ್​ನವರ ಕುಮ್ಮಕ್ಕಿನಿಂದ. ನಿಜವಾದ ರೈತರು ಹೋರಾಟದಲ್ಲಿ ಭಾಗವಹಿಸುತ್ತಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್​ ವಿರುದ್ಧ ಆರೋಪ ಮಾಡಿದ್ದಾರೆ.

ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

By

Published : Jan 25, 2021, 3:55 PM IST

ಹುಬ್ಬಳ್ಳಿ: ಇಡೀ ಜಗತ್ತಿನಲ್ಲಿ ಮೋದಿ ಜನಪ್ರಿಯ ನಾಯಕ. ಆದರೂ ಕಾಂಗ್ರೆಸ್​ನವರ ಕುಮ್ಮಕ್ಕಿನಿಂದ ಪ್ರತಿಭಟನೆ, ರ‍್ಯಾಲಿ ನಡೆಸಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಕಾಂಗ್ರೆಸ್​ ವಿರುದ್ಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆಕ್ರೋಶ

ನಗರದಲ್ಲಿಂದು ಮಾತನಾಡಿದ ಅವರು, ಒಂದೆರೆಡು ವರ್ಷಗಳ ಕಾಲ ಕೃಷಿ ಕಾಯ್ದೆಗಳ ಕುರಿತು ಪ್ರಯೋಗ ನಡೆಯಲಿ. ನಂತರ ರೈತರಿಗೆ ತೊಂದರೆಯಾದ್ರೆ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಲು ಮುಂದಾಗಬಹುದು ಎಂದರು.

ಯಾವ ಸರ್ಕಾರವೂ ರೈತರಿಗೆ ತೊಂದರೆ ನೀಡುವ ಕೆಲಸ ಮಾಡಲ್ಲ. ನಿಜವಾದ ರೈತರು ಹೋರಾಟದಲ್ಲಿ ಭಾಗವಹಿಸುತ್ತಿಲ್ಲ. ಬೃಹತ್​ ಟ್ರ್ಯಾಕ್ಟರ್​ ರ‍್ಯಾಲಿ ನಡೆಸುತ್ತಿರುವುದು ಕಾಂಗ್ರೆಸ್​ನವರ ಕುಮ್ಮಕ್ಕಿನಿಂದ ಎಂದು ಆರೋಪಿಸಿದರು.

ಇಷ್ಟು ವರ್ಷದಿಂದ ಎಪಿಎಂಸಿ ಕಾಯ್ದೆ ರಾಜ್ಯದಲ್ಲಿದ್ದು, ಯಾಕೆ ರೈತರಿಗೆ ಒಳ್ಳೆಯದಾಗಿಲ್ಲ? ರಾಜಕೀಯ ಉದ್ದೇಶದಿಂದ ಕಾಂಗ್ರೆಸ್​ನವರು ಈ ರೀತಿಯ ಕೆಲಸ‌ ಮಾಡುತ್ತಿದ್ದಾರೆ ಎಂದು ಶೆಟ್ಟರ್ ತಿಳಿಸಿದರು.

ABOUT THE AUTHOR

...view details