ಕರ್ನಾಟಕ

karnataka

ಕುರುಬ ಸಮುದಾಯವನ್ನು ಎಸ್​ಸಿ, ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ಬಸವರಾಜ ದೇವರು ಒತ್ತಾಯ

By

Published : Sep 6, 2020, 7:00 PM IST

ಕುರುಬ ಸಮುದಾಯವನ್ನು ಎಸ್​ಸಿ, ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ಒತ್ತಾಯಿಸಿ ಮನಸೂರ ರೇವಣ ಸಿದ್ದೇಶ್ವರ ಮಠದ ಜಗದ್ಗುರು ಬಸವರಾಜ ದೇವರು, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.

Jagadguru Basavaraja Devaru Statement About  ST, ST reservation
ಕುರುಬ ಸಮುದಾಯವನ್ನು ಎಸ್​ಸಿ, ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ಬಸವರಾಜ ದೇವರು ಒತ್ತಾಯ

ಹುಬ್ಬಳ್ಳಿ:ಕೆಲವೊಂದು ರಾಜ್ಯಗಳಲ್ಲಿ ಕುರುಬ ಸಮುದಾಯಕ್ಕೆ ಎಸ್​ಸಿ, ಎಸ್​ಟಿ ಮೀಸಲಾತಿ ನೀಡಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಸಹ ಕುರುಬ ಸಮುದಾಯಯವನ್ನು ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸುವಂತೆ ಮನಸೂರ ರೇವಣ ಸಿದ್ದೇಶ್ವರ ಮಠದ ಜಗದ್ಗುರು ಬಸವರಾಜ ದೇವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕುರುಬ ಸಮುದಾಯವನ್ನು ಎಸ್​ಸಿ, ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ಬಸವರಾಜ ದೇವರು ಒತ್ತಾಯ

ಕುರುಬ ಸಮುದಾಯಕ್ಕೆ ಎಸ್​ಸಿ, ಎಸ್​ಟಿ ಮೀಸಲಾತಿ ನೀಡುವ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಈಗಾಗಲೇ ಕುರುಬ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ಎಸ್​ಸಿ, ಎಸ್​ಟಿ ಮೀಸಲಾತಿಗೆ ಸೇರಿಸುವಂತೆ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಕುರುಬ ಸಮಾಜಕ್ಕೆ ಹಲವಾರು ರೀತಿಯಲ್ಲಿ ಮೀಸಲಾತಿ ನೀಡಲಾಗಿದ್ದು, ಅದೇ ರೀತಿ ಕರ್ನಾಟಕದಲ್ಲೂ ಮೀಸಲಾತಿ ನೀಡಬೇಕು. ಕುರುಬ ಸಮಾಜ ಬಹಳ ಸಂಕಷ್ಟದಲ್ಲಿರುವುದರಿಂದ ಸಚಿವ ಬೈರತಿ ಬಸವರಾಜ ಅವರ ಮುಖಾಂತರ ಮನವಿ ಸಲ್ಲಿಸಲಾಗಿದೆ. ಸಚಿವರು ಸಹ ಮುಖ್ಯಮಂತ್ರಿ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ ಎಂದರು.

ಇನ್ನೂ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರು ನಾಮಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಇದಕ್ಕೆ ಅನುಮೋದನೆ ಸಿಗಲಿದೆ ಎಂಬ ಭರವಸೆ ಇದೆ ಎಂದರು.

ABOUT THE AUTHOR

...view details