ಕರ್ನಾಟಕ

karnataka

ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ತಾರ್ಕಿಕ ಅಂತ್ಯ: ವರ್ಗಾವಣೆಗೊಂಡ ಕಮಿಷನರ್, ಡಿಸಿಪಿ

ಸುಮಾರು ದಿನಗಳಿಂದ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

By

Published : Oct 20, 2020, 9:47 PM IST

Published : Oct 20, 2020, 9:47 PM IST

IPS officers transferred
ಕಮೀಷನರ್, ಡಿಸಿಪಿ

ಹುಬ್ಬಳ್ಳಿ:ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ಮುಸುಕಿನ ಗುದ್ದಾಟಕ್ಕೆ ಅಂತೂ ಇಂತೂ ಫುಲ್ ಸ್ಟಾಪ್ ಸಿಕ್ಕಂತಾಗಿದ್ದು, ಐಪಿಎಸ್ ಅಧಿಕಾರಿಗಳ ಕಿತ್ತಾಟ ಹಿನ್ನೆಲೆ ಪೊಲೀಸ್ ಆಯುಕ್ತ ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಯ ಆದೇಶ ಪ್ರತಿ

ಸುಮಾರು ದಿನಗಳಿಂದ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ ತಾರ್ಕಿಕ ಅಂತ್ಯ ಸಿಕ್ಕಿದ್ದು, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಹಾಗೂ ಡಿಸಿಪಿ ಕೃಷ್ಣಕಾಂತ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಡಿಸಿಪಿ ಆಗಿದ್ದ ಕೃಷ್ಣಕಾಂತ ಅವರನ್ನು ಧಾರವಾಡ ಜಿಲ್ಲಾ ಎಸ್ ಪಿ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಆರ್ ದಿಲೀಪ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ದಿಲೀಪ್ ಅವರ ಸ್ಥಾನಕ್ಕೆ ಲಾಥೂರಾಮ ನೇಮಕಗೊಂಡಿದ್ದಾರೆ. ಧಾರವಾಡ ಎಸ್ ಪಿ ಯಾಗಿದ್ದ ವರ್ತಿಕಾ‌ ಕಟಿಯಾರ ಅವರಿಗೆ ಇನ್ನು ಸ್ಥಳ‌ ನಿಗದಿಯಾಗಿಲ್ಲ.

ABOUT THE AUTHOR

...view details