ಕರ್ನಾಟಕ

karnataka

ETV Bharat / city

ಜ.21ರಿಂದ ಹುಬ್ಬಳ್ಳಿಯಿಂದ ಕೊಚ್ಚಿ ಹಾಗೂ ಗೋವಾಗೆ ನೇರ ವಿಮಾನ ಹಾರಾಟ : ಸಚಿವ ಪ್ರಲ್ಹಾದ್ ಜೋಶಿ - ಇಂಡಿಗೋ ವಿಮಾನಯಾನ

ಈ ಕಾರ್ಯಕ್ಕೆ ಸಹಕರಿಸಿದ ಇಂಡಿಗೋ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ..

indigo new flight from huballi to kochi and goa news
ಇಂಡಿಗೋ ವಿಮಾನಯಾನ

By

Published : Jan 9, 2021, 7:18 PM IST

ಹುಬ್ಬಳ್ಳಿ :ಇಂಡಿಗೋ ವಿಮಾನಯಾನ ಹುಬ್ಬಳ್ಳಿಯಿಂದ ಮತ್ತೆರಡು ನಗರಗಳ ಜೊತೆ ನೇರ ಸಂಪರ್ಕ ಬೆಳೆಸಲಿದೆ. ಹುಬ್ಬಳ್ಳಿ-ಗೋವಾ ಮತ್ತು ಹುಬ್ಬಳ್ಳಿ-ಕೊಚ್ಚಿ ನೇರ ವಿಮಾನ ಸೇವೆಯನ್ನು ಜ.21ರಿಂದ ಪುನಾರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಿಂದ ಕೊಚ್ಚಿ ಮತ್ತು ಗೋವಾಗೆ ಇಂಡಿಗೋ ವಿಮಾನ ಹಾರಾಟ..

ಓದಿ: ಬಾಲಾಕೋಟ್​​ ಏರ್​ಸ್ಟ್ರೈಕ್​ನಲ್ಲಿ 300 ಜನರು ಸಾವು: ಪಾಕ್​ನ ಮಾಜಿ ಅಧಿಕಾರಿ

ಈ ಜೋಶಿ ಅವರು ಫೇಸ್​​ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂಡಿಗೋ ಸಂಸ್ಥೆಯ ಹಿರಿಯ ಉನ್ನತ ಅಧಿಕಾರಿಗಳು ಇದೇ ಜನವರಿ 21ರಿಂದ ವಿಮಾನ ಸೇವೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

ವಿಮಾನಯಾನದ ವಿವರ ಈ ಕೆಳಗಿನಂತಿದೆ :

ಸಮಯ :

* ಮಧ್ಯಾಹ್ನ 1.00ಕ್ಕೆ ಹುಬ್ಬಳ್ಳಿಯಿಂದ ಹೊರಟು 3.10ಕ್ಕೆ ಕೊಚ್ಚಿ ತಲುಪುವುದು

* ಮಧ್ಯಾಹ್ನ 3.45ಕ್ಕೆ ಕೊಚ್ಚಿಯಿಂದ ಹೊರಟು 5.30ಕ್ಕೆ ಹುಬ್ಬಳ್ಳಿಗೆ ತಲುಪುವುದು

* ಸಂಜೆ 6.00ಕ್ಕೆ ಹುಬ್ಬಳ್ಳಿಯಿಂದ ಹೊರಟು 7.00ಕ್ಕೆ ಗೋವಾ ತಲುಪುವುದು

* ಸಂಜೆ 7.30 ಕ್ಕೆ ಗೋವಾದಿಂದ ಹೊರಟು 8.30ಕ್ಕೆ ಹುಬ್ಬಳ್ಳಿ ತಲುಪುವುದು

ಈ ಕಾರ್ಯಕ್ಕೆ ಸಹಕರಿಸಿದ ಇಂಡಿಗೋ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಜೋಶಿ ‌ಮನವಿ ಮಾಡಿದ್ದಾರೆ.

ABOUT THE AUTHOR

...view details