ಹುಬ್ಬಳ್ಳಿ: ಲಾಕ್ಡೌನ್ ಅವಧಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೈನ್ ಶಾಪ್ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿರುವ ಘಟನೆ ನಗರದ ಸಿಂಪಿಗಲ್ಲಿಯಲ್ಲಿ ನಡೆದಿದೆ.
ಲಾಕ್ಡೌನ್ನಲ್ಲಿ ಮದ್ಯ ಮಾರಾಟ : ವೈನ್ ಶಾಪ್ ಮೇಲೆ ಅಬಕಾರಿ ಅಧಿಕಾರಿಗಳ ದಾಳಿ - hubli crime news
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು ವಿವಿಧ ಬ್ರಾಂಡಿನ 18,34,174 ರೂ. ಮೌಲ್ಯದ ಮದ್ಯ ಹಾಗೂ ಒಂದು ಆಟೋ ರಿಕ್ಷಾ ವಶಕ್ಕೆ ಪಡೆದಿದ್ದಾರೆ.
Illegal liquor sales in hubli
ಖಚಿತ ಮಾಹಿತಿ ಮೇರೆಗೆ ರುಕ್ಮಿಣಿ ಶೆಟ್ಡಿ ಎಂಬುವರ ಒಡೆತನದ ಗುರುದತ್ತ ವೈನ್ಸ್ ಮೇಲೆ ಅಬಕಾರಿ ನಿರೀಕ್ಷಕರಾದ ನೇತ್ರಾ ಉಪ್ಪಾರ ನೇತೃತ್ವದಲ್ಲಿ ದಾಳಿ ಮಾಡಿ ವಿವಿಧ ಬ್ರಾಂಡಿನ 18,34,174 ರೂ. ಮೌಲ್ಯದ ಮದ್ಯ ಹಾಗೂ ಒಂದು ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.