ಧಾರವಾಡ: ಜಿಲ್ಲೆಯಲ್ಲಿ ಬೀದಿಗಿಳಿದರೆ ಮತ್ತೆ ಲಾಠಿ ಏಟು ಬೀಳಲಿದೆ. ಪೊಲೀಸ್ ಬಲ ಹೆಚ್ಚಾಗಿದೆ. ಲಾಕ್‌ಡೌನ್‌ಗೆ ಜನ ಸ್ಪಂದಿಸದ ಹಿನ್ನೆಲೆ ಪುನಃ ಬಲ ಪ್ರಯೋಗದ ನಿರ್ಧಾರ ಮಾಡಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಜನ ಬೀದಿಗಿಳಿದರೆ ಮತ್ತೆ ಬೀಳುತ್ತೆ ಲಾಠಿ ಏಟು: ಮನೆಯಲ್ಲೇ ಇರಿ ಎಂದು ಸಚಿವ ಶೆಟ್ಟರ್ ಮನವಿ - coronavirus update
ಲಾಕ್‌ಡೌನ್ ಆದೇಶ ಪಾಲಿಸುವುದು ಜನರ ಕರ್ತವ್ಯ. ಬೇಕಾಬಿಟ್ಟಿ ಹೊರ ಬಂದರೆ ಬಲ ಪ್ರಯೋಗದ ಮೂಲಕ ಜನರನ್ನು ಮನೆಗೆ ಕಳುಹಿಸುವಂತೆ ಪೊಲೀಸರಿಗೆ ಹೇಳಿದ್ದಾಗಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.
![ಜನ ಬೀದಿಗಿಳಿದರೆ ಮತ್ತೆ ಬೀಳುತ್ತೆ ಲಾಠಿ ಏಟು: ಮನೆಯಲ್ಲೇ ಇರಿ ಎಂದು ಸಚಿವ ಶೆಟ್ಟರ್ ಮನವಿ District in-charge minister Jagadish shettar](https://etvbharatimages.akamaized.net/etvbharat/prod-images/768-512-6711425-311-6711425-1586342013185.jpg)
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಜನರಿಂದ ಸಡಲಿಕೆ ಆಗಿರುವ ವಿಚಾರದ ಸಂಬಂಧವಾಗಿಯೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಮೊದಲಿನಂತೆ ಬಲ ಪ್ರಯೋಗ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಜನ ಸ್ವಯಂ ಪ್ರೇರಿತವಾಗಿ ಶಾಂತಿ, ಶಿಸ್ತು ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.