ಹುಬ್ಬಳ್ಳಿ: ನಾನು ಕ್ಷಮೆ ಕೇಳುವಂತ ಹೇಳಿಕೆ ಏನು ನೀಡಿದ್ದಿನಿ? ನಾನು ಹಿಜಾಬ್ ಹಾಕಬೇಕು ಅಂತ ಹೇಳಿದ್ದೆ. ಆದರೆ, ಮಾಧ್ಯಮವರು ಅದನ್ನ ತಿರುಚಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಶಾಸಕ ಜಮೀರ್ ಅಹ್ಮದ್ ತಿರಗೇಟು ನೀಡಿದರು.
ನಗರದಲ್ಲಿಂದು ಮಾತಾನಾಡಿದ ಅವರು, ನಾನು ಹೆಲ್ಮೆಟ್ ರೀತಿ ಹಿಜಾಬ್ ಹಾಕೋಬೇಕು, ಹೆಲ್ಮೆಟ್ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಾಬ್ ಕೂಡಾ ನೀಡುತ್ತೆ ಎಂದು ಹೇಳಿದ್ದೇನೆ. ಬಹಳ ಜನ ಹಿಜಾಬ್ ಹಾಕೋಲ್ಲ. ಹಾಗೇ ಹೆಲ್ಮೆಟ್ ಕೂಡಾ ಕಡ್ಡಾಯವಿದ್ದರೂ ಹಾಕೋಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಜಮೀರ್ ಅಹ್ಮದ್ ಇದನ್ನೂ ಓದಿ:ಜಮೀರ್ ಹೇಳಿಕೆ ಒಪ್ಪುವುದಿಲ್ಲ, ಅವರು ಕ್ಷಮೆ ಕೋರಬೇಕು: ಡಿಕೆಶಿ
ಹೆಣ್ಣು ಮಕ್ಕಳು ಏನಕ್ಕೆ ಹಿಜಾಬ್ ಹಾಕ್ತಾರೆ ಅನ್ನೋದಕ್ಕೆ ನಾನು ಕಾರಣ ಹೇಳಿದ್ದು ಅಷ್ಟೆ. ಅದರಿಂದ ಏನು ಲಾಭ ಅಂತ ಹೇಳಿದ್ದೆ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದರು.
ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತವೆ ಎಂದು ಹುಬ್ಬಳ್ಳಿಯಲ್ಲಿ ಜಮೀರ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಕಾಂಗ್ರೆಸ್ ಪಕ್ಷ ಆ ಹೇಳಿಕೆ ಒಪ್ಪುವುದಿಲ್ಲ. ಅವರು ಕ್ಷಮೆ ಕೇಳಬೇಕು ಎಂದು ತಿಳಿಸಿದ್ದರು.