ಹುಬ್ಬಳ್ಳಿ:ಅವರೆಲ್ಲ ಬುದ್ಧಿಮಾಂದ್ಯರು. ಅವರಿಗೆ ನಮ್ಮವರು-ತಮ್ಮವರು ಅಂತ ಯಾರೂ ಇಲ್ಲ. ಈ ಕೊರಗು ಬರಬಾರದು ಎಂಬ ದೃಷ್ಟಿಯಿಂದ ನಗರದ ಯುವಕರು ಸ್ನೇಹ ಸಂಕೇತವಾಗಿ ಬೆಲ್ಟ್ ಕಟ್ಟಿ ಫ್ರೆಂಡ್ಶಿಪ್ ಡೇ ಆಚರಿಸಿದರು.
ಬುದ್ಧಿಮಾಂದ್ಯರ ಜೊತೆ ಫ್ರೆಂಡ್ಶಿಪ್ ಡೇ ಆಚರಿಸಿದ ಹುಬ್ಬಳ್ಳಿ ಯುವಕರು - ಫ್ರೆಂಡ್ಶಿಪ್ ಡೇ
ಹುಬ್ಬಳ್ಳಿ ಸ್ಮೈಲ್ ಸ್ಪೇಡಿಂಗ್ ಯುವಕರ ಸಂಘ ಸ್ನೇಹ ದಿನಾಚರಣೆಯ ಅಂಗವಾಗಿ ಬುದ್ಧಿಮಾಂದ್ಯರಿಗೆ ಫ್ರೆಂಡ್ಶಿಪ್ ಬೆಲ್ಟ್ ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.
ಬುದ್ಧಿಮಾಂದ್ಯರ ಜೊತೆ ಫ್ರೆಂಡ್ಶಿಪ್ ಡೇ ಆಚರಿಸಿದ ಹುಬ್ಬಳ್ಳಿ ಯುವಕರು
ನಗರದ ಗೊಪ್ಪನಕೊಪ್ಪದ ಉಣಕಲ್ ರಸ್ತೆಯಲ್ಲಿರುವ ಮನೋವಿಕಾಸ ಬುದ್ಧಿಮಾಂದ್ಯ ಮಕ್ಕಳ ಜೊತೆ ಹುಬ್ಬಳ್ಳಿ ಸ್ಮೈಲ್ ಸ್ಪೇಡಿಂಗ್ ಯುವಕರ ಸಂಘ ಸ್ನೇಹಿತರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು. ಸಂಘದ ಸದಸ್ಯರು, ಬುದ್ಧಿಮಾಂದ್ಯರಿಗೆ ಫ್ರೆಂಡ್ಶಿಪ್ ಬೆಲ್ಟ್ ಕಟ್ಟಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಯುವಕರ ಸಂಘಟನೆ ಪ್ರತಿ ವರ್ಷ ವಿನೂತನವಾಗಿ ಫ್ರೆಂಡ್ಶಿಪ್ ಡೇ ಆಚರಿಸುತ್ತಾ ಬಂದಿದೆ. ಆದ್ರೆ ಈ ವರ್ಷ ಅನಾಥರು ಹಾಗೂ ಬುದ್ಧಿಮಾಂದ್ಯರ ಜೊತೆ ಆಚರಿಸುವ ಮೂಲಕ ಅವರಿಗೆ ಯಾರೂ ಇಲ್ಲ ಎಂಬ ಕೊರಗು ನೀಗಿಸುವ ಪ್ರಯತ್ನ ಮಾಡಿದೆ.
TAGGED:
ಫ್ರೆಂಡ್ಶಿಪ್ ಡೇ