ಕರ್ನಾಟಕ

karnataka

ETV Bharat / city

ಬೈಕ್​ ಸೈಲೆನ್ಸರ್​ ಪೈಪ್ಸ್​ ಮೇಲೆ​ ಏರಿದ ರೂಲರ್...​ ಶೋಕಿ ಯುವಕರಿಗೆ ಶಾಕ್ ಕೊಟ್ಟ ಹು-ಧಾ ಪೊಲೀಸ್ರು! - ಸೈಲೆನ್ಸರ್

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬೈಕ್​ಗಳ ಸೈಲೆನ್ಸರ್​ಗಳನ್ನು ರೂಲರ್​ನಿಂದ ನಾಶ ಮಾಡಲಾಗಿದೆ. ಬೈಕ್​ಗಳ ಸೈಲೆನ್ಸರ್​ಗಳನ್ನು ಸಂಚಾರಿ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ರೂಲರ್ ಹತ್ತಿಸಿ ನುಜ್ಜುಗುಜ್ಜು ಮಾಡಲಾಗಿದೆ.

ಬೈಕ್​ನಲ್ಲಿ ಶೋಕಿ ಮಾಡುತ್ತಿದ್ದ ಯುವಕರಿಗೆ ಶಾಕ್ ನೀಡಿದ ಪೊಲೀಸರು

By

Published : Aug 19, 2019, 7:26 PM IST

ಧಾರವಾಡ:ನಗರದಲ್ಲಿ ಸೌಂಡ್ ಮಾಡಿಕೊಂಡು ಸುತ್ತಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಧಾರವಾಡ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಸೈಲೆನ್ಸರ್​ಗಳ ಮೇಲೆ ರೂಲರ್ ಹತ್ತಿಸಿ ಕರ್ಕಶವಾಗಿ ಸೌಂಡ್ ಮಾಡುವ ಸವಾರರಿಗೆ ಪೊಲೀಸ್ ಆಯುಕ್ತ ಎಂ. ಎನ್. ನಾಗರಾಜ್ ವಾರ್ನಿಂಗ್ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬೈಕ್​ಗಳ ಸೈಲೆನ್ಸರ್​ಗಳನ್ನು ರೂಲರ್​ನಿಂದ ನಾಶ ಮಾಡಲಾಗಿದೆ. ಬೈಕ್​ಗಳ ಸೈಲೆನ್ಸರ್​ಗಳನ್ನು ಸಂಚಾರಿ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ರೂಲರ್ ಹತ್ತಿಸಿ ನುಜ್ಜುಗುಜ್ಜು ಮಾಡಲಾಗಿದೆ. 110 ಕ್ಕೂ ಹೆಚ್ಚು ಬೈಕ್​ಗಳ ಸುಮಾರು 6 ಲಕ್ಷ ಮೌಲ್ಯದ ಸೈಲೆನ್ಸರ್​ಗಳನ್ನು ನಾಶಪಡಿಸಲಾಗಿದೆ.

ಬೈಕ್​ನಲ್ಲಿ ಶೋಕಿ ಮಾಡುತ್ತಿದ್ದ ಯುವಕರಿಗೆ ಶಾಕ್ ನೀಡಿದ ಪೊಲೀಸರು

ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಶ್ರೀಮಂತರ ಮಕ್ಕಳು ಕರ್ಕಶ ಶಬ್ಧ ಮಾಡಿಕೊಂಡು ಬೈಕ್​ಗಳನ್ನು ಓಡಿಸುತ್ತಿದ್ದರು.‌ ಹೀಗಾಗಿ ಸೈಲೆನ್ಸರ್​ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಅವುಗಳ‌ ಮೇಲೆ ರೂಲರ್ ಹತ್ತಿಸಿ‌ದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಸಹ‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details