ಹುಬ್ಬಳ್ಳಿ: ರಾತ್ರಿ ವೇಳೆ ಉರಿಯಬೇಕಿದ್ದ ಬೀದಿ ದೀಪಗಳು ಹಗಲು ಹೊತ್ತಿನಲ್ಲಿಯೂ ಕೂಡ ಉರಿಯುತ್ತಿವೆ. ಎಲ್ಲಿ ದೀಪಗಳ ಅವಶ್ಯಕತೆ ಇದೆಯೋ ಅಲ್ಲಿ ಸರಿಯಾಗಿ ವ್ಯವಸ್ಥೆ ಮಾಡದ ಹೆಸ್ಕಾಂ, ಹಗಲಿನಲ್ಲಿ ದೀಪ ಉರಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹಗಲು ಹೊತ್ತಿನಲ್ಲೂ ದೀಪ ಉರಿಸಿದ ಹೆಸ್ಕಾಂ: ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ - ಹೆಸ್ಕಾಂ ಸುದ್ದಿ
ಹು-ಧಾ ಮಹಾನಗರದಲ್ಲಿ ಹಲವು ಕಡೆ ಬೀದಿ ದೀಪಗಳ ಸಮಸ್ಯೆ ಇದ್ದರೂ ಸಹ ತಲೆ ಕಡಿಸಿಕೊಳ್ಳದ ಹೆಸ್ಕಾಂ, ಹಗಲು ಹೊತ್ತಿನಲ್ಲಿ ದೀಪ ಉರಿಯುತ್ತಿದ್ದರೂ ಸಹ ಬೆಜಾವಾಬ್ದಾರಿತನ ತೋರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ಹೆಸ್ಕಾಂ
ಕೂಡಲೇ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡು ಬೀದಿ ದೀಪಗಳ ಸರಿಯಾದ ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.