ಹುಬ್ಬಳ್ಳಿ:ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಡಿ.17 ರಿಂದ 20 ರವರೆಗೆ ಇಲ್ಲಿನ ರಾಜ್ ನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ರಣಜಿ ಪಂದ್ಯಾವಳಿ ನಡೆಯಲಿದೆ. ಮೊಟ್ಟ ಮೊದಲ ಬಾರಿಗೆ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪಂದ್ಯದ ನೇರಪ್ರಸಾರ ಮಾಡಲಾಗುತ್ತಿದೆ ಎಂದು ಕೆಎಸ್ಸಿಎ ಧಾರವಾಡ ವಲಯ ನಿಯಂತ್ರಕ ಅವಿನಾಶ ಪೋತದಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್ಸಿಎ) ರಣಜಿ ಪಂದ್ಯಕ್ಕೆ ಅಗತ್ಯ ಸಿದ್ಧತೆ ಮಾಡಿದ್ದು, ಈವರೆಗೆ 8 ರಣಜಿ ಪಂದ್ಯಗಳು ಈ ಕ್ರೀಡಾಂಗಣದಲ್ಲಿ ನಡೆದಿವೆ. ಆದರೆ ಈವರೆಗೆ ಕೆಪಿಎಲ್ ಪಂದ್ಯಗಳನ್ನು ಬಿಟ್ಟು ರಣಜಿಯ ಯಾವೊಂದು ಪಂದ್ಯ ನೇರ ಪ್ರಸಾರವಾಗಿರಲಿಲ್ಲ. ಸದ್ಯ ಸ್ಟಾರ್ಸ್ ಸ್ಪೋರ್ಟ್ಸ್ ವಾಹಿನಿ ಮೊದಲ ಬಾರಿಗೆ ನೇರ ಪ್ರಸಾರ ಮಾಡಲಿದೆ ಎಂದು ಹೇಳಿದರು.