ಹುಬ್ಬಳ್ಳಿ :ರಾಜ್ಯ ರೈಲ್ವೆ ಪೊಲೀಸರು ವಾಸಿಸುವಂತಹ ಕ್ವಾಟರ್ಸ್ ಇದೀಗ ಕುಡುಕರ ಅಡ್ಡೆಯಾಗಿದೆ. ಇದರಿಂದ ಕ್ವಾಟರ್ಸ್ನಲ್ಲಿ ವಾಸಿಸುವಂತಹ 300ಕ್ಕೂ ಅಧಿಕ ಪೊಲೀಸ್ ಕುಟುಂಬಗಳು ಬಾಡಿಗೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ.
ಕುಡುಕರ ಅಡ್ಡೆಯಾದ ಶತಮಾನದ ರೈಲ್ವೆ ಪೊಲೀಸ್ ಕ್ವಾಟರ್ಸ್.. ಶೀಘ್ರ ಕ್ರಮಕ್ಕೆ ಸ್ಥಳೀಯರ ಆಗ್ರಹ ಗದಗ ರಸ್ತೆಯ ನೆಹರು ನಗರದ ಪೊಲೀಸ್ ಕ್ವಾಟರ್ಸ್ನಲ್ಲಿ ಸುಮಾರು 300 ಕುಟುಂಬಗಳು ನಿಶ್ಚಿಂತವಾಗಿ ವಾಸಿಸುತ್ತಿದ್ದವು. ಆದರೆ, ಕಟ್ಟಡ ಬೀಳ್ಳುವ ಸ್ಥಿತಿಯಲ್ಲಿದ್ದರಿಂದ ಎಲ್ಲರೂ ಕ್ವಾಟರ್ಸ್ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.
ಸುಮಾರು ನೂರು ವರ್ಷದ ಹಿಂದಿನ ಕ್ವಾಟರ್ಸ್ ಇದೀಗ ಪಾಳು ಬಿದ್ದಿದೆ. ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ಸುತ್ತಮುತ್ತ ವಾಸಿಸುವವರಿಗೆ ತುಂಬ ತೊಂದರೆಯಾಗಿದೆ.
ಪಾಳು ಬಿದ್ದಿರುವ ಕಟ್ಟಡಗಳಲ್ಲಿ ಕಾನೂನು ಬಾಹಿರ ಹಾಗೂ ಅಕ್ರಮ ಚಟುವಟಿಕೆಗಳ ಉಪಟಳಗಳನ್ನು ತಡೆಯಲು ಶೀಘ್ರ ಕ್ರಮಕೈಗೊಳ್ಳಬೇಕು. ಈಗಿರುವ ಕಟ್ಟಡಗಳನ್ನು ಸಂಪೂರ್ಣ ತೆರವುಗೊಳಿಸಿ, ನೂತನವಾಗಿ ರೈಲ್ವೆ ಪೊಲೀಸರಿಗೆ ವಸತಿ ಗೃಹ ಒದಗಿಸಲು ನಿರ್ಧಾರ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ 2 ದಿನಗಳ ಹಿಂದೆ ರೈಲ್ವೆ ಪೊಲೀಸ್ ಎಡಿಜಿಪಿ ಭಾಸ್ಕರ್ ರಾವ್, ಎಸ್ಪಿ ಶ್ರೀಗೌರಿ, ಡಿಎಸ್ಪಿ ಪುಷ್ಪಲತಾ ಮತ್ತು ಇನ್ಸ್ಪೆಕ್ಟರ್ ಆಂಜನೇಯ ರೈಲ್ವೆ ಪೊಲೀಸ್ ವಸತಿ ನಿಲಯಕ್ಕೆ ಭೇಟಿ ನೀಡಿ, ರಾಜ್ಯ ಗೃಹ ಇಲಾಖೆಯ ಸೂಚನೆ ಮೇರೆಗೆ, ಈಗಿರುವ ಕಟ್ಟಡಗಳ ಕುರಿತು ಸರ್ಕಾರ ಸೂಕ್ತವಾದ ಕ್ರಮವನ್ನು ತೆಗೆದುಕೊಂಡು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ.