ಕರ್ನಾಟಕ

karnataka

ETV Bharat / city

ಈಟಿವಿ‌ ಭಾರತ ಇಂಪ್ಯಾಕ್ಟ್: ನೆಹರು ಮೈದಾನಕ್ಕೆ ಒದಗಿತು ಸ್ವಚ್ಛತಾ ಭಾಗ್ಯ - ಈಟಿವಿ‌ ಭಾರತ ಇಂಪ್ಯಾಕ್ಟ್

ಮಳೆ ನೀರು ನಿಂತು, ಕಸ ಬೆಳೆದು ಇದೊಂದು ಕ್ರೀಡಾಂಗಣವಾ ಎಂಬುದನ್ನು ಅನುಮಾನಾಸ್ಪದವಾಗಿ ನೋಡುವಂತಾಗಿದ್ದ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದ ದುಸ್ಥಿತಿ ಕುರಿತು 'ಈಟಿವಿ ಭಾರತ' ಬಿತ್ತರಿಸಿತ್ತು. ಮೈದಾನದ ಅವ್ಯವಸ್ಥೆ ಕುರಿತ ವರದಿ ಮಹಾನಗರ ಪಾಲಿಕೆಯ ಗಮನ ಸೆಳೆದಿದೆ. ಇಂದು ಪಾಲಿಕೆ ಸಿಬ್ಬಂದಿ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

hubli-nehru-stadium
ನೆಹರು ಮೈದಾನ

By

Published : Jul 31, 2020, 5:17 PM IST

ಹುಬ್ಬಳ್ಳಿ:ಸರಿಯಾದ ನಿರ್ವಹಣೆ ಇಲ್ಲದೆ ಹಾಳು ‌ಕೊಂಪೆಯಾಗಿದ್ದ ನಗರದ ಹೃದಯ ಭಾಗದಲ್ಲಿರುವ ನೆಹರು ಕ್ರೀಡಾಂಗಣಕ್ಕೆ ಕೊನೆಗೂ ಸ್ವಚ್ಛತಾ ಭಾಗ್ಯ ಸಿಕ್ಕಿದೆ.

ನೆಹರು ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿತ್ತು. ಸುದ್ದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛತಾ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ.

ನೆಹರು ಮೈದಾನಕ್ಕೆ ಸಿಕ್ಕ ಸ್ವಚ್ಛತಾ ಭಾಗ್ಯ

ಇದನ್ನು ಓದಿ-ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣ

‌ಮಳೆಯ ನೀರು ನಿಂತುಕೊಂಡು ಕೆರೆಯಂತಾಗಿತ್ತು. ಎಲ್ಲೆಂದರಲ್ಲಿ ಕಸ ಬೆಳೆದು ನಿಂತಿದ್ದರಿಂದ ಇದೊಂದು ಕ್ರೀಡಾಂಗಣವಾ ಎಂಬ ಸಂಶಯ ನೋಡುಗರಲ್ಲಿ ಮೂಡುತ್ತಿತ್ತು. ಇಂದು ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಈಟಿವಿ ಭಾರತ ವರದಿಗೆ ಸ್ಪಂದಿಸಿ ಕ್ರೀಡಾಂಗಣ ಸ್ವಚ್ಛಗೊಳಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇವೆ. ಈ ಕ್ರೀಡಾಂಗಣ ಸಾರ್ವಜನಿಕರ ಕ್ರೀಡಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಆಶಿಸುತ್ತೇವೆ.

ABOUT THE AUTHOR

...view details