ಹುಬ್ಬಳ್ಳಿ:ಪ್ರತಿಷ್ಠಿತ ಮೂರುಸಾವಿರ ಮಠದ ಉತ್ತರಾಧಿಕಾರ ವಿವಾದಕ್ಕೆ ಇತ್ಯರ್ಥ ಹಾಡುವ ಮಹತ್ವಪೂರ್ಣ ಸಭೆಯೆಂದೇ ಹೆಳಲಾಗುತ್ತಿರುವ ಬಹಿರಂಗ ಸಭೆಗೆ ಬರದ ಸಿದ್ಧತೆ ನಡೆದಿದೆ.
ಉತ್ತರಾಧಿಕಾರಿ ವಿವಾದ ಸಭೆ: ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಬೆಂಬಲಿಗರು ಭೇಟಿ - ಮೂರುಸಾವಿರ ಮಠ ಉತ್ತರಾಧಿಕಾಗಿ ವಿವಾಧ ಸಭೆ
ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಮೂರು ಸಾವಿರ ಮಠದ ಉತ್ತರಾಧಿಕಾರಿ ಘೋಷಣೆಯ ಬಹಿರಂಗ ಸಭೆಯ ಹಿನ್ನಲೆ ದಿಂಗಾಲೇಶ್ವರ ಸ್ವಾಮೀಜಿಯವರ ಬೆಂಬಲಿಗರು ಮಠದ ಭೇಟಿ ನೀಡಿ ಸಭೆ ಸಿದ್ದತೆ ಕುರಿತು ಪರಿಶೀಲನೆ ನಡೆಸಿದರು.
ಮೂರುಸಾವಿರ ಮಠ
ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಉತ್ತರಾಧಿಕಾರಿ ಘೋಷಣೆಯ ಬಹಿರಂಗ ಸಭೆಯ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರ ಬೆಂಬಲಿಗರು ಮೂರುಸಾವಿರ ಮಠದ ಆವರಣಕ್ಕೆ ಭೇಟಿ ನೀಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಹದಿನೈದು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸಲಿದ್ದು, ವೇದಿಕೆ ಸೇರಿದಂತೆ ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ. ಸಭೆಯ ವೀಕ್ಷಣೆಗಾಗಿ ಎಲ್ಇಡಿ ಪರದೆಯನ್ನು ಹಾಕಲಾಗುತ್ತಿದ್ದು, ಸಭೆಗೆ ಆಗಮಿಸುವ ಭಕ್ತಾದಿಗಳಿಗೆ ಊಟ ವ್ಯವಸ್ಥೆ ಮಾಡಲಾಗುತ್ತೆ ಎಂದು ಮೂರು ಸಾವಿರ ಮಠದ ಮಂಡಳಿಯ ಮುಖಂಡರು ಮಾಹಿತಿ ನೀಡಿದರು