ಹುಬ್ಬಳ್ಳಿ:ನಗರದ ಕಿಮ್ಸ್ ಆಸ್ಪತ್ರೆಯ ವೈದ್ಯರ ನಿಯೋಗ ಹುಬ್ಬಳ್ಳಿಯ ಗೃಹ ಕಚೇರಿಗೆ ಭೇಟಿ ನೀಡಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರೊಂದಿಗೆ ಕೊವೀಡ್ 19 ಬಗ್ಗೆ ಚರ್ಚೆ ನಡೆಸಿತು.
ಬೊಮ್ಮಾಯಿ ಭೇಟಿ ಮಾಡಿದ ಕಿಮ್ಸ್ ವೈದ್ಯರು.. ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ - hubli news
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಾಮಲಿಂಗಪ್ಪ ನೇತೃತ್ವದ ತಂಡ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿ ತಮ್ಮ ವಿವಿಧ ಬೇಡಿಕೆಯನ್ನ ಈಡೇರಿಸುವಂತೆ ಮನವಿ ಸಲ್ಲಿಸಿದ್ದಾರೆ. ಮನವಿಯನ್ನ ಸ್ವೀಕರಿಸಿದ ಬೊಮ್ಮಾಯಿ,ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಬೊಮ್ಮಾಯಿ ಭೇಟಿ ಮಾಡಿದ ಕಿಮ್ಸ್ ವೈದ್ಯರು..ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ
ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದ್ದು, ಪ್ಲಾಸ್ಮಾ ಥೆರಪಿ ನೀಡಲು ಐಸಿಎಂಆರ್ ಕಿಮ್ಸ್ಗೆಗೆ ಅನುಮತಿ ನೀಡಿದೆ. ಹೀಗಾಗಿ ತಮ್ಮ ವಿವಿಧ ಬೇಡಿಕೆಯನ್ನ ಈಡೇರಿಸುವಂತೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅವರ ನೇತೃತ್ವದ ತಂಡ, ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಅವರ ಮನವಿಯನ್ನ ಸ್ವೀಕರಿಸಿದ ಬೊಮ್ಮಾಯಿ, ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ತಿಳಿಸಿದರು.
ಇದೇ ವೇಳೆ ಮಹಾಮಾರಿ ಕೋವಿಡ್ -19 ಸಂದರ್ಭದಲ್ಲಿ ಕಿಮ್ಸ್ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು.