ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ- ಹೈದರಾಬಾದ್ ಮಧ್ಯೆ ಮಾರ್ಚ್ 31 ರಿಂದ ಮತ್ತೆ ವಿಮಾನ ಸೇವೆ ಆರಂಭ

72 ಸೀಟ್ ಸಾಮರ್ಥ್ಯ ಹೊಂದಿರುವ ಎಟಿಆರ್ 72 - 600 ಮಾದರಿಯ ವಿಮಾನಗಳನ್ನು ಅಲೈಯನ್ಸ್ ಏರ್‌ ನಿಯೋಜಿಸಲಿದೆ. ಏರ್ ಇಂಡಿಯಾ ಬುಕಿಂಗ್ ಸೈಟ್ ಪ್ರಕಾರ, ಫ್ಲೈಟ್ 9ಐ -879 ಬೆಳಗ್ಗೆ 6 : 30ಕ್ಕೆ ಹೈದರಾಬಾದ್‌ನಿಂದ ಹೊರಟು ಬೆಳಗ್ಗೆ 7: 55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿದೆ. ಇತ್ತ ವಿಮಾನ 9ಐ-880 ಬೆಳಗ್ಗೆ 8 : 20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 9 : 50 ಕ್ಕೆ ಹೈದರಾಬಾದ್ ವಿಮಾನ ನಿಲ್ದಾಣ ತಲುಪಲಿದೆ.

hubli-hyderabad-flight-start-from-march-31
ವಿಮಾನ ಸೇವೆ

By

Published : Mar 18, 2021, 12:09 PM IST

ಹುಬ್ಬಳ್ಳಿ : ಕೊರೊನಾ ಸೋಂಕು ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ಹುಬ್ಬಳ್ಳಿ - ಹೈದರಾಬಾದ್ ಮಧ್ಯದ ವಿಮಾನ ಸೇವೆ ಮಾರ್ಚ್ 31 ರಿಂದ ಮತ್ತೆ ಆರಂಭವಾಗಲಿದೆ.

ಹುಬ್ಬಳ್ಳಿ - ಧಾರವಾಡದ ನಾಗರಿಕರು ಹಲವು ದಿನಗಳಿಂದ ಹೈದರಾಬಾದ್‌ಗೆ ವಿಮಾನ ಸೇವೆ ಆರಂಭಿಸುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಅಲೈಯನ್ಸ್ ಏರ್, ಹುಬ್ಬಳ್ಳಿ- ಹೈದರಾಬಾದ್ ಮಧ್ಯೆ ವಿಮಾನ ಹಾರಾಟಕ್ಕೆ ಮುಂದಾಗಿದೆ. ಈ ಮೂಲಕ ಮಾರ್ಚ್ 31 ರಿಂದ ವಾರದಲ್ಲಿ 3 ದಿನ ( ಸೋಮವಾರ, ಬುಧವಾರ ಮತ್ತು ಶುಕ್ರವಾರ ) ವಿಮಾನ ಸೇವೆ ಲಭ್ಯ ಇರುತ್ತದೆ.

72 ಸೀಟ್ ಸಾಮರ್ಥ್ಯ ಹೊಂದಿರುವ ಎಟಿಆರ್ 72 - 600 ವಿಮಾನಗಳನ್ನು ಅಲೈಯನ್ಸ್ ಏರ್‌ ನಿಯೋಜಿಸಲಿದೆ. ಏರ್ ಇಂಡಿಯಾ ಬುಕಿಂಗ್ ಸೈಟ್ ಪ್ರಕಾರ, ಫ್ಲೈಟ್ 9ಐ -879 ಬೆಳಗ್ಗೆ 6 : 30ಕ್ಕೆ ಹೈದರಾಬಾದ್‌ನಿಂದ ಹೊರಟು ಬೆಳಗ್ಗೆ 7 : 55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತಲುಪಲಿದೆ.

ಇತ್ತ ವಿಮಾನ 9ಐ-880 ಬೆಳಗ್ಗೆ 8 : 20ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 9:50 ಕ್ಕೆ ಹೈದರಾಬಾದ್ ವಿಮಾನ ನಿಲ್ದಾಣ ತಲುಪಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಫೇಸ್​ ಬುಕ್ ಹಾಗೂ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details