ಹುಬ್ಬಳ್ಳಿ :ಡ್ರಗ್ಸ್ ಹಾಗೂ ಇನ್ನಿತರ ಮಾದಕವಸ್ತು ಸೇವನೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹುಬ್ಬಳ್ಳಿಯ ಹೆಸ್ಕಾಂ ಇನ್ಸ್‌ಪೆಕ್ಟರ್ ಮುರಗೇಶ್ ಆರ್.ಚನ್ನಣ್ಣವರ್ ಸೈಕಲ್ ಜಾಥಾ ಮೂಲಕ ಕಾಶ್ಮೀರದಿಂದ ಹುಬ್ಬಳ್ಳಿಗೆ ಬಂದ ವೇಳೆ ಪೊಲೀಸ್ ಸಿಬ್ಬಂದಿ ಹಾಗೂ ಆಟೋ ಚಾಲಕರ ಸಂಘದಿಂದ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸನ್ಮಾನಿಸಿ ಬೀಳ್ಕೋಟ್ಟರು.
ನಂತರ ಮಾತನಾಡಿದ ಹೆಸ್ಕಾಂ ಇನ್ಸ್‌ಪೆಕ್ಟರ್ ಮುರಗೇಶ್ ಚನ್ನಣ್ಣವರ್, ದೇಶದಲ್ಲಿ ಹೆಚ್ಚಾಗಿರುವ ಮಾದಕ ದ್ರವ್ಯ, ಗಾಂಜಾ ಸೇವನೆಯ ಶಮನಕ್ಕೆ ಹಾಗೂ ಯುವಕರಿಗೆ ತಿಳಿ ಹೇಳಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.