ಹುಬ್ಬಳ್ಳಿ: ಮತಾಂತರಕ್ಕೆ ಯತ್ನಿಸಿದ ಆರೋಪಿಗಳ ಪರ ಡಿಸಿಪಿ ನಿಂತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಆವರಣದಲ್ಲಿ ಡಿಸಿಪಿಗೆ ನಿಂದಿಸಿದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಗರದ ವಕೀಲ ಹಾಗೂ ಹಿಂದೂ ಸಂಘಟನೆ ಮುಖಂಡ ಅಶೋಕ ಅಣ್ವೇಕರ್ ವಿರುದ್ಧ ನವನಗರ ಠಾಣೆಯಲ್ಲಿ ಡಿಸಿಪಿ ಕೆ.ರಾಮರಾಜನ್ ದೂರು ದಾಖಲಿಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಧರ್ಮ ನಿಂದನೆ, ಶಾಂತಿ ಭಂಗ ಪ್ರಕರಣ ದಾಖಲಿಸಲಾಗಿದೆ.
ಮತಾಂತರ ವಿರೋಧಿಸಿ ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ವಕೀಲ ಹಾಗು ಹಿಂದೂ ಸಂಘಟನೆ ಮುಖಂಡ ಅಶೋಕ ಅಣ್ವೇಕರ ಡಿಸಿಪಿಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎನ್ನಲಾಗ್ತಿದೆ. ಅದೇ ಸಂದರ್ಭ ಡಿಸಿಪಿ ಕೂಡ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು.
ಅಶೋಕ ಅಣ್ವೇಕರ್ ಸೇರಿ ಪ್ರತಿಭಟನೆಯಲ್ಲಿ 100 ಜನ ಭಾಗಿಯಾಗಿದ್ದರು. ಬಜರಂಗದಳ ಹಾಗು ಇತರ ಹಿಂದೂ ಪರ ಸಂಘಟನೆಯ 100 ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್ 504, 143, 147, 153, 295A, 298, 353 ಅಡಿ ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪ : ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ