ಹುಬ್ಬಳ್ಳಿ:ಅಧಿಕ ಮಳೆ, ಬರ, ವಿವಿಧ ಕಾರಣಕ್ಕೆ ಬೆಳೆ ನಾಶವಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿದ್ದರೆ, ಅವರಿಗೆ ಬೆಳೆ ವಿಮೆಯನ್ನು ನೀಡುವ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ (phasal bima yojana) ಯಿಂದ ರೈತರಿಗೆ ಲಾಭವಾಗುತ್ತಿಲ್ಲ.
ಅನ್ನದಾತ ದೇಶದ ಬೆನ್ನೆಲುಬು ಎಂದು ಬಾಯಿ ಮಾತಿನಲ್ಲಿ ಹೇಳುವ ಸರ್ಕಾರಗಳು ಈಗ ರೈತರ ಅಳಲನ್ನು ಕೇಳುವಲ್ಲಿ ವಿಫಲವಾಗಿವೆ. ಒಂದಾದ ಮೇಲೊಂದರಂತೆ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಳ್ಳುವ ರೈತನ ಕಣ್ಣೀರು ಒರೆಸುವವರು ಯಾರು.? ಎಂಬ ಪ್ರಶ್ನೆ ಎದುರಾಗಿದೆ. ಮಳೆಯಿಲ್ಲದೇ ಬೆಳೆದ ಬೆಳೆಗಳು ಕೈ ಸೇರುತ್ತಿಲ್ಲ. ಅಲ್ಲದೇ ಬೆಳೆ ವಿಮೆ ಮಾಡಿಸಿದ ರೈತರಿಗೆ ಸರಿಯಾದ ಸಮಯಕ್ಕೆ ಬೆಳೆ ವಿಮೆ ಕೂಡ ಸಿಗುತ್ತಿಲ್ಲ. ಸರ್ಕಾರ ಬೆಳೆ ವಿಮೆ ಕಂಪನಿಗಳ ಪರ ನಿಂತಿವೆ ಎಂಬ ಮಾತುಗಳು ರೈತ ವಲಯದಿಂದ ಕೇಳಿ ಬರುತ್ತಿವೆ. ಇದರಿಂದ ಬೆಳೆ ವಿಮೆ ಮಾಡಿಸಿದ ರೈತ ಅತಂತ್ರನಾಗಿದ್ದಾನೆ.