ಕರ್ನಾಟಕ

karnataka

ETV Bharat / city

ಕೇಂದ್ರ ಬಜೆಟ್: ಹುಬ್ಬಳ್ಳಿ-ಧಾರವಾಡ ಜನರ ನಿರೀಕ್ಷೆಗಳೇನು

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಬಿಆರ್​ಟಿಎಸ್​​ ಯೋಜನೆ ಬಂದ್ ಮಾಡಿ ಫ್ಲೈಓವರ್ ನಿರ್ಮಿಸಿ ಮೆಟ್ರೋ ಟ್ರೈನ್ ಮಾದರಿಯಲ್ಲಿ ಅವಳಿ ನಗರಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆಯಾಗಬೇಕು ಎಂಬುದು ಅವಳಿ ನಗರ ನಿವಾಸಿಗಳ ಆಶಯವಾಗಿದೆ.

hubli-dharwad-peoples-expectations-on-central-budget
ಕೇಂದ್ರ ಬಜೆಟ್​​

By

Published : Jan 28, 2021, 9:53 PM IST

ಧಾರವಾಡ: ಫೆ. 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​​​ ಮಂಡನೆ ಮಾಡಲಿದ್ದು, ಹುಬ್ಬಳ್ಳಿ-ಧಾರವಾಡದ ಜನರು ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಕ್ಕೆ ಉತ್ತಮ ಪಾಲು ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಬಜೆಟ್​ನಲ್ಲಿ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು. ರೈತರಿಗೆ ನೀಡುತ್ತಿರುವ ಕಿಸಾನ್​ ಸಮ್ಮಾನ್​ ನಿಧಿಯ ಮೊತ್ತವನ್ನು ಆರು ಸಾವಿರ ರೂ.ನಿಂದ ಹನ್ನೆರಡು ಸಾವಿರಕ್ಕೆ ಹೆಚ್ಚಿಸಬೇಕು. ಕೈಗಾರಿಕಾ ಕ್ಷೇತ್ರಕ್ಕೆ ಒತ್ತು ನೀಡಿ ಉದ್ಯೋಗ ಸೃಷ್ಟಿಗೆ ಕೇಂದ್ರ ಮುಂದಾಗಬೇಕು.

ಕೇಂದ್ರ ಬಜೆಟ್ ಕುರಿತು ಹುಬ್ಬಳ್ಳಿ-ಧಾರವಾಡ ಜನರ ನಿರೀಕ್ಷೆಗಳೇನು..!

ಅಲ್ಲದೆ, ಹುಬ್ಬಳ್ಳಿ-ಧಾರವಾಡವನ್ನು ಇಂಡಸ್ಟ್ರಿಯಲ್ ಹಬ್ ಮಾಡಬೇಕು. ಇದರಿಂದ ಹೆಚ್ಚೆಚ್ಚು ಕೈಗಾರಿಕೆಗಳು ಸ್ಥಳೀಯವಾಗಿ ನಿರ್ಮಾಣವಾಗುತ್ತವೆ. ಇದರಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬರೀ ಹುಬ್ಬಳ್ಳಿಗೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಧಾರವಾಡಕ್ಕೂ ಸ್ವಲ್ಪ ಒತ್ತು ನೀಡಬೇಕು. ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆ ಕಡಿಮೆ ಮಾಡಿ ಜನಜೀವನಕ್ಕೆ ಅನುಕೂಲ ಮಾಡಬೇಕು.

ಓದಿ-ವಿಜಯೇಂದ್ರ ವಸೂಲಿ ಮಾಡ್ಲಿ, ಎಲ್ಲಾ ಖಾತೆಗಳನ್ನು ಬೊಮ್ಮಾಯಿಗೆ ಕೊಡ್ಲಿ: ಬಿಎಸ್​ವೈ ವಿರುದ್ಧ ಯತ್ನಾಳ್​​ ಮತ್ತೆ ವಾಕ್ಬಾಣ

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಬಿಆರ್​ಟಿಎಸ್​​ ಯೋಜನೆ ಬಂದ್ ಮಾಡಿ ಫ್ಲೈಓವರ್ ನಿರ್ಮಿಸಿ ಮೆಟ್ರೋ ಟ್ರೈನ್ ಮಾದರಿಯಲ್ಲಿ ಅವಳಿ ನಗರಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆಯಾಗಬೇಕು ಎಂಬುದು ಅವಳಿ ನಗರ ನಿವಾಸಿಗಳ ಆಶಯವಾಗಿದೆ.

ABOUT THE AUTHOR

...view details