ಹುಬ್ಬಳ್ಳಿ: ನಾಳೆಯಿಂದ ಒಂದು ವಾರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಇರುವ ಹಿನ್ನೆಲೆ ಇಂದು ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ನಾಳೆಯಿಂದ ಧಾರವಾಡ ಜಿಲ್ಲೆಯೂ ಲಾಕ್ಡೌನ್: ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ - lockdown for a week
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಕಾಲ ಧಾರವಾಡ ಜಿಲ್ಲೆ ಸ್ತಬ್ಧವಾಗಲಿದೆ. ಹೀಗಾಗಿ ಇಂದು ಅಗತ್ಯ ಸಾಮಗ್ರಿಗಳ ಖರೀದಿಯ ಭರದಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಜನ ಮುಗಿಬಿದ್ದಿದ್ದಾರೆ.

ದಿನಸಿ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ನಾಳೆಯಿಂದ ಒಂದು ವಾರ ಕಾಲ ಜಿಲ್ಲೆ ಸ್ತಬ್ಧವಾಗಲಿದೆ. ಹೀಗಾಗಿ ಇಂದು ನಗರದ ಜನತಾ ಬಜಾರ್, ಅಕ್ಕಿಪೇಟ್ಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಅಗತ್ಯ ಸಾಮಗ್ರಿಗಳ ಖರೀದಿಯ ಭರದಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಜನ ಮುಗಿಬಿದ್ದಿದ್ದಾರೆ.
ದಿನಸಿ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ
ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನ ಅದ್ಯಾವುದನ್ನೂ ಲೆಕ್ಕಿಸದೆ ಇರುವುದು ಮಾತ್ರ ಅಪಾಯವನ್ನು ಆಹ್ವಾನಿಸದಂತಿದೆ.