ಕರ್ನಾಟಕ

karnataka

ETV Bharat / city

ಎಲ್ಲೆಂದರಲ್ಲಿ ಕಸ ಚೆಲ್ಲಿದಿರೋ ಎಚ್ಚರ..ತೆರಬೇಕಾಗತ್ತೆ ಭಾರಿ ದಂಡ; ಹು-ಧಾ ಪಾಲಿಕೆ ದಿಟ್ಟ ನಿರ್ಧಾರ - ಹುಬ್ಬಳ್ಳಿ ಸುದ್ದಿ

ಹು-ಧಾ ಮಹಾನಗರ ಪಾಲಿಕೆ ಸ್ವಚ್ಛ ನಗರ ಕನಸಿಗೆ ಮುನ್ನುಡಿ ಬರೆದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ದಂಡ ವಿಧಿಸಲು ಮುಂದಾಗಿದೆ. ರಸ್ತೆಗಳ ಅಕ್ಕಪಕ್ಕದಲ್ಲಿ ಕಸ ಹಾಕುವವರಿಗೆ 5 ಸಾವಿರದಿಂದ 25 ಸಾವಿರ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ.

Hubli-Dharwad city corporation
ಹು-ಧಾ ಮಹಾನಗರ ಪಾಲಿಕೆ

By

Published : Feb 9, 2021, 11:47 AM IST

ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ. ಸ್ವಚ್ಛ ನಗರದ ಕನಸಿಗೆ ಮುನ್ನುಡಿ ಬರೆದಿರುವ ಈ ಪಾಲಿಕೆ ಈಗ ಅವಳಿ ನಗರದ ಸ್ವಚ್ಚತೆಗೆ ಮತ್ತೊಂದು ಶಿಸ್ತು ಕ್ರಮವನ್ನು ಕೈಗೆತ್ತಿಕೊಂಡಿದೆ. ಈ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ.

ಹು-ಧಾ ಪಾಲಿಕೆ ದಿಟ್ಟ ನಿರ್ಧಾರ

ಹೌದು. ಹು-ಧಾ ಮಹಾನಗರ ಪಾಲಿಕೆ ಸ್ವಚ್ಛ ನಗರ ಕನಸಿಗೆ ಮುನ್ನುಡಿ ಬರೆದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ ದಂಡ ವಿಧಿಸಲು ಮುಂದಾಗಿದೆ. ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ನಿವಾಸಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಈಗಾಗಲೇ ದಂಡ ವಿಧಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಶುರು ಮಾಡಿದ್ದಾರೆ. ನಗರವನ್ನು ಸುಂದರ ಹಾಗೂ ರೋಗ ಮುಕ್ತವಾಗಿಸಲು ಮಹಾನಗರ ಪಾಲಿಕೆ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದೆ.

ಆದರೂ ಜನರು ಮಾತ್ರ ಎಲ್ಲೆಂದರಲ್ಲಿ ಕಸ ಚೆಲ್ಲುವ ಚಾಳಿಯನ್ನು ಬಿಟ್ಟಿಲ್ಲ. ಅಲ್ಲದೇ ಕಸ ಸಂಗ್ರಹಕ್ಕೆ ಮನೆ ಬಳಿ ಬರುವ ವಾಹನದಲ್ಲಿ ಕಸ ಹಾಕುವ ಬದಲು ರಾತ್ರಿ ಸಮಯದಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿ ಕಸ ಹಾಕುತ್ತಿದ್ದಾರೆ. ಇಂತಹವರಿಗೆ ತಕ್ಕಪಾಠ ಕಲಿಸಲು ಐದು ಸಾವಿರದಿಂದ 25 ಸಾವಿರ ದಂಡ ವಿಧಿಸಲು ಪಾಲಿಕೆ ಮುಂದಾಗಿದೆ. ಬೃಹತ್ ತ್ಯಾಜ್ಯಕ್ಕೆ 25 ಸಾವಿರ ರೂ., ಸಾಲಿಡ್ ವೇಸ್ಟ್​ಗೆ 5 ಸಾವಿರ ರೂಪಾಯಿ ದಂಡವಿದೆ.

ವಲಯವಾರು ಪರಿಸರ ಅಭಿಯಂತಕರು, ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರು ರಾತ್ರಿ ಬಡಾವಣೆಗೆ ತೆರಳಿ ಗಮನಿಸಲು ಆರಂಭಿಸಿದ್ದಾರೆ. ಕಸ ಹಾಕುವವರ ಮಾಹಿತಿ ಪಡೆದು ಆಯಾ ವ್ಯಾಪ್ತಿ ಪೊಲೀಸರಿಗೆ ತಿಳಿಸಲಾಗುತ್ತದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ ದಂಡ ವಿಧಿಸುತ್ತಾರೆ. ಒಂದು ವೇಳೆ ಸ್ಥಳದಲ್ಲೇ ದಂಡ ನೀಡದಿದ್ದರೇ ವಾಹನ ಸೀಜ್ ಮಾಡುವುದು ಇಲ್ಲವೇ ದಂಡವನ್ನು ಆಸ್ತಿ ಕರದಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ:ಬೀದಿನಾಯಿಗಳ‌ ನಿಯಂತ್ರಣಕ್ಕೆ ಹು-ಧಾ ಪಾಲಿಕೆ ಪರಿಣಾಮಕಾರಿ ಕ್ರಮ

ABOUT THE AUTHOR

...view details