ಕರ್ನಾಟಕ

karnataka

ETV Bharat / city

ವಾರಾಂತ್ಯದ ಕರ್ಫ್ಯೂ ನಡುವೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಅಭಿವೃದ್ಧಿ ಕಾರ್ಯ - ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಭಿವೃದ್ಧಿ ಕೆಲಸ

ಪಾಲಿಕೆ ಅಧಿಕಾರಿಗಳು ಕರ್ಫ್ಯೂ ಮಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಬೆಂಗೇರಿ, ಗೋಪನಕೊಪ್ಪ, ಕೇಶ್ವಾಪುರ, ಅರಳಿಕಟ್ಟೆ, ನಾಗಶೆಟ್ಟಿಕೊಪ್ಪ ಪ್ರದೇಶಗಳಲ್ಲಿ ₹46 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವಿಕೆ, ಡಾಂಬರು ಹಾಕುವ ಕೆಲಸವನ್ನು ಮಹಾನಗರ ಪಾಲಿಕೆ ಶುರು ಮಾಡಿದೆ.

development
ಹುಬ್ಬಳ್ಳಿ-ಧಾರವಾಡ

By

Published : Jan 8, 2022, 9:52 PM IST

ಹುಬ್ಬಳ್ಳಿ:ಕೋವಿಡ್ ಹಾಗೂ ಒಮಿಕ್ರಾನ್​ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ವಾರಾಂತ್ಯದ ಕರ್ಫ್ಯೂ ವಿಧಿಸಿದೆ. ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ಕರ್ಫ್ಯೂ‌ಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದರ ನಡುವೆ ಮಹಾನಗರ ಪಾಲಿಕೆ ವಾರಾಂತ್ಯದ ಕರ್ಫ್ಯೂ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ.

ವಾರಾಂತ್ಯದ ಕರ್ಫ್ಯೂ ನಡುವೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಅಭಿವೃದ್ಧಿ ಕಾರ್ಯ

ಮುಖ್ಯವಾಗಿ ಹುಬ್ಬಳ್ಳಿಯಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ರಸ್ತೆ ಗುಂಡಿಗಳ ದುರಸ್ತಿ, ಯುಜಿಡಿ, ಸಿ.ಸಿ‌.ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ವಾಹನ ದಟ್ಟಣೆಯಿಂದ ತೊಂದರೆಯಾಗುತ್ತದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯುಂಟಾಗಿತ್ತು. ಆದರೆ, ಶನಿವಾರ ಹಾಗೂ ಭಾನುವಾರ ಕರ್ಫ್ಯೂ ಜಾರಿ ಮಾಡಿದ್ದರಿಂದ ವಾಹನ ಸಂಚಾರ ವಿರಳವಾಗಿದೆ.

ಇದರ ಸದುಪಯೋಗ ಪಡಿಸಿಕೊಂಡ ಪಾಲಿಕೆ ಅಧಿಕಾರಿಗಳು, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಬೆಂಗೇರಿ, ಗೊಪ್ಪನಕೊಪ್ಪ, ಕೇಶ್ವಾಪುರ, ಅರಳಿಕಟ್ಟೆ, ನಾಗಶೆಟ್ಟಿಕೊಪ್ಪ ಪ್ರದೇಶಗಳಲ್ಲಿ 46 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವಿಕೆ, ಡಾಂಬರು ಹಾಕುವ ಕೆಲಸವನ್ನು ಪಾಲಿಕೆ ಶುರು ಮಾಡಿದೆ.

ವಾರಾಂತ್ಯದ ಕರ್ಫ್ಯೂ ನಡುವೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಅಭಿವೃದ್ಧಿ ಕಾರ್ಯ

ಹುಬ್ಬಳ್ಳಿ ನಗರದ ರಿಲಯನ್ಸ್ ಫ್ರೆಶ್ ಹಿಂಬದಿಯ ವಾರ್ಡ್​ ನಂಬರ್ 31 ರಲ್ಲಿ‌ 34 ಲಕ್ಷ ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿ ಸಿದ್ಧತೆಯ ಕಾರ್ಯ ಭರದಿಂದ ಸಾಗಿದೆ. ಅವಳಿ ನಗರದ ಹಲವು ಕಡೆ ಪಾಲಿಕೆಯಿಂದ ಯುಜಿಡಿಗೆ ಪೈಪ್​ಲೈನ್ ಅಳವಡಿಕೆ, ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳು ಸಹ ಜರುಗುತ್ತಿವೆ. ಕರ್ಫ್ಯೂ ಹಾಗೂ ಕೋವಿಡ್ ಮಹಾಮಾರಿ ನಡುವೆಯೂ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿರುವ ಪಾಲಿಕೆ ಅಧಿಕಾರಿಗಳ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಭಾರಿ ಹಿಮಪಾತದಲ್ಲೇ ಗರ್ಭಿಣಿ ಹೊತ್ತು ಸಾಗಿದ ಸೈನಿಕರು.. ಯೋಧರ ಮಾನವೀಯತೆಗೆ ಸಲಾಂ

ABOUT THE AUTHOR

...view details