ಹುಬ್ಬಳ್ಳಿ (ಧಾರವಾಡ):ಹುಬ್ಬಳ್ಳಿ ಗಲಭೆ ಪ್ರಕರಣದ ಬಂಧಿತ ಆರೋಪಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅನುಮತಿ ನೀಡಿ ಹುಬ್ಬಳ್ಳಿಯ 4ನೇ ಜೆಎಮ್ಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸರು ಯುವಕನನ್ನು ಪ್ರಕರಣದ 124ನೇ ಆರೋಪಿಯಾಗಿ ಬಂಧಿಸಿದ್ದರು. ಆನಂದ್ ನಗರ ನಿವಾಸಿಯಾಗಿರುವ ಈತ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇಂದು ಪರೀಕ್ಷೆ ಬರೆಯಬೇಕಿತ್ತು. ಪೋಷಕರಿಗೆ ಈ ಬಗ್ಗೆ ಯಾರನ್ನು ಭೇಟಿಯಾಗಬೇಕೆಂಬುದು ತೋಚದ ಕಾರಣ ಆರೋಪಿ ಇಂದಿನ ಪರೀಕ್ಷೆ ಮಿಸ್ ಮಾಡಿಕೊಂಡಿದ್ದಾನೆ.