ಹುಬ್ಬಳ್ಳಿ : ಆರೋಗ್ಯವಾಗಿರುವವರೇ ಮತದಾನ ಮಾಡಲು ಹಿಂದೆಮುಂದೆ ನೋಡುವ ಪರಿಸ್ಥಿತಿಯಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದ್ದಾರೆ.
ಮತದಾನ ಮಾಡಿ ಇತರರಿಗೆ ಮಾದರಿಯಾದ ಕೋವಿಡ್ ಸೋಂಕಿತ - ಹುಬ್ಬಳ್ಳಿ ಸೋಂಕಿತ ವ್ಯಕ್ತಿಯಿಂದ ಮತದಾನ
ಸೋಂಕಿತ 52 ವರ್ಷದ ವ್ಯಕ್ತಿಯೊಬ್ಬ ವಾರ್ಡ್ ನಂಬರ 49ರಲ್ಲಿ ವೋಟಿಂಗ್ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ..
ಕೋವಿಡ್ ಸೋಂಕಿತ
ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ನಡೆಯಿತು. ಸೋಂಕಿತ 52 ವರ್ಷದ ವ್ಯಕ್ತಿಯೊಬ್ಬ ವಾರ್ಡ್ ನಂಬರ 49ರಲ್ಲಿ ವೋಟಿಂಗ್ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು, ಮಹಾನಗರ ಪಾಲಿಕೆ ವೈದ್ಯರು ಇಂತಹ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದ್ದು, ಮತದಾನದ ಹಕ್ಕು ಚಲಾವಣೆ ಮಾಡಲು ಸಹಾಯ ಮಾಡಿದ್ದಾರೆ.