ಕರ್ನಾಟಕ

karnataka

ETV Bharat / city

ಮೇಕಪ್ ಮಾಡಿ ಗಿನ್ನಿಸ್ ದಾಖಲೆ‌ ಮಾಡಿದ ಹುಬ್ಬಳ್ಳಿ ಬ್ಯೂಟಿಷಿಯನ್ - Hubli beautician Shailaja Srirama Bagade Guinness record news

ಮದುಮಗಳಿಗೆ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಬ್ಯೂಟಿಷಿಯನ್ ಶೈಲಜಾ ಶ್ರೀರಾಮ ಬಗಾಡೆ ಪಾಲ್ಗೊಂಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ದಾಖಲೆ ಮಾಡುವ ಮೂಲಕ ಹುಬ್ಬಳ್ಳಿಯ ಹಿರಿಮೆ - ಗರಿಮೆ ಹೆಚ್ಚಿಸಿದ್ದಾರೆ.

ಗಿನ್ನಿಸ್ ದಾಖಲೆ‌ ಮಾಡಿದ ಹುಬ್ಬಳ್ಳಿ ಬ್ಯೂಟಿಷಿಯನ್
ಗಿನ್ನಿಸ್ ದಾಖಲೆ‌ ಮಾಡಿದ ಹುಬ್ಬಳ್ಳಿ ಬ್ಯೂಟಿಷಿಯನ್

By

Published : Feb 5, 2021, 12:44 PM IST

ಹುಬ್ಬಳ್ಳಿ: ಗಿನ್ನಿಸ್ ದಾಖಲೆ ಪುಟದಲ್ಲಿ ಹೆಸರು ಗಳಿಸಬೇಕು ಎಂಬುದು ಎಲ್ಲರ ಕನಸು. ಮಹಿಳೆಯೊಬ್ಬರು ಸುಂದರವಾಗಿ ಕಾಣಿಸುವಂತೆ ಮೇಕಪ್ ಮಾಡಿ ಗಿನ್ನಿಸ್ ದಾಖಲೆ ಮಾಡುವ ಮೂಲಕ ಹುಬ್ಬಳ್ಳಿಯ ಹಿರಿಮೆ - ಗರಿಮೆಯನ್ನು ಹೆಚ್ಚಿಸಿದ್ದಾರೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್

ಹುಬ್ಬಳ್ಳಿ ನಿವಾಸಿಯಾದ ಶೈಲಜಾ ಶ್ರೀರಾಮ ಬಗಾಡೆ ಅವರು ಗಿನ್ನಿಸ್ ದಾಖಲೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬ್ರಾಹ್ಮಣಿ ಇವೆಂಟ್ಸ್ ಅಂಡ್​ ಎಕ್ಸಿಬಿಷನ್, ಬೀಸಾ ಇಂಟರ್ ನ್ಯಾಶನಲ್ ಬ್ಯೂಟಿ ಸಲ್ಯೂಸನ್, ಆಲ್ ಇಂಡಿಯನ್ ಹೇರ್ ಅಂಡ್​​ ಬ್ಯೂಟಿ ಅಸೋಸಿಯೆಸನ್ ಸಹಭಾಗಿತ್ವದಲ್ಲಿ 45 ನಿಮಿಷಗಳಲ್ಲಿ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆಯನ್ನು 2020 ರ ಡಿಸೆಂಬರ್‌ 20 ರಂದು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶೈಲಜಾ ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ದಾಖಲೆ ಮಾಡುವ ಮೂಲಕ ಹುಬ್ಬಳ್ಳಿಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಕುರಿತು ಸಂತಸ ಹಂಚಿಕೊಂಡ ಶೈಲಜಾ

ದೇಶಾದ್ಯಂತ 1,146 ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿಗದಿತ ಸಮಯಕ್ಕಿಂತ ಕಡಿಮೆ ಅವಧಿಯಲ್ಲೇ ಯಶಸ್ವಿಯಾಗಿ ಮೇಕಪ್ ಮಾಡಿ ದಾಖಲೆ ಮಾಡಿದ್ದಾರೆ.

ಇನ್ನು ಶೈಲಜಾ ಅವರು ಮೂಲತಃ ರಾಣೆಬೆನ್ನೂರಿನವರಾಗಿದ್ದು, ಹುಬ್ಬಳ್ಳಿಯಲ್ಲಿ 26 ವರ್ಷಗಳಿಂದ ಬ್ಯೂಟಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಅಕ್ಷಯ ಎನ್‌ಕ್ಲಬ್‌ನಲ್ಲಿ ಶೈಲಾ ಬ್ಯೂಟಿ ಕೇರ್ ನಡೆಸುತ್ತಿದ್ದಾರೆ. ಜೊತೆಗೆ ಫೇಸ್ ಕೊಂಟರಿಂಗ್, ಐಲ್ಯಾತ್, ಹೈಲೈಟ್ಸ್‌ನಂತಹ ಕಠಿಣ ಸವಾಲಿನ ಮೇಕಪ್ ಮಾಡುತ್ತಾರೆ. ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದಕ್ಕೆ ಅವರ ಸ್ನೇಹಿತರು ಹಾಗೂ ಹಿತೈಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details