ಹುಬ್ಬಳ್ಳಿ (ಧಾರವಾಡ): ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುವ ವಕೀಲರು ಸೂಕ್ತ ರಸ್ತೆ ಸೌಲಭ್ಯಕ್ಕಾಗಿ ಬೇಡಿಕೆಯಿಟ್ಟು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ಸೂಕ್ತ ರಸ್ತೆ ಸೌಲಭ್ಯಕ್ಕಾಗಿ ವಕೀಲರ ಪ್ರತಿಭಟನೆ - hubli advocates protest
ಸೂಕ್ತ ರಸ್ತೆ ಸೌಲಭ್ಯ ಒದಗಿಸಿಕೊಡಿ ಎಂದು ಆಗ್ರಹಿಸಿ ಹುಬ್ಬಳ್ಳಿಯ ವಕೀಲರು ಸೋಮವಾರ ಪ್ರತಿಭಟನೆ ನಡೆಸಿದರು.

ರಸ್ತೆಗಾಗಿ ವಕೀಲರ ಪ್ರತಿಭಟನೆ
ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಮಹಿಳಾ ವಿದ್ಯಾಪೀಠ ಸಿಗ್ನನ್ನಿಂದ ತಿಮ್ಮಸಾಗರ ಬಸವೇಶ್ವರ ದೇವಸ್ಥಾನದ ರಸ್ತೆ ಮುಖಾಂತರ ಬರುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸಂಚಾರಕ್ಕೆ ಯೋಗ್ಯವಲ್ಲದ, ಅಪಾಯಕಾರಿ ರಸ್ತೆಯಾಗಿದ್ದು ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ. ಆದರೂ ಈವರೆಗೆ ಯಾವುದೇ ಕ್ರಮ ಜರುಗಿಸದೇ ಪಾಲಿಕೆ ನಿರ್ಲಕ್ಷ್ಯ ತೋರಿದೆ ಎಂದು ವಕೀಲರು ದೂರಿದರು.
ಇದನ್ನೂ ಓದಿ:ಕೊಲೆಯಾದ ಭಜರಂಗದಳ ಕಾರ್ಯಕರ್ತನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತನಿಗೆ ಡಿಜಿಪಿ ಪ್ರತಿಕ್ರಿಯೆ