ಹುಬ್ಬಳ್ಳಿ:ವೈಯಕ್ತಿಕ ಹಾಗೂ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸೋಮವಾರ ತಡರಾತ್ರಿ ರಾಯನಾಳ ಗ್ರಾಮದಲ್ಲಿ ನಡೆದಿದ್ದ ಗ್ರಾಮ ಪಂಚಾಯತ್ ಸದಸ್ಯನ ಹತ್ಯೆಗೆ ಟ್ವಿಸ್ಟ್ ಸಿಕ್ಕಿದೆ. ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಠದಾರಿ (30) ಹತ್ಯೆಯನ್ನು ತನ್ನ ತವರು ಮನೆ ಕುಟುಂಬದವರೇ ಮಾಡಿದ್ದಾರೆಂದು ಹತ್ಯೆಯಾದ ದೀಪಕ ಪತ್ನಿ ಪುಷ್ಪಾ ಪಠದಾರ ಗಂಭೀರವಾಗಿ ಆರೋಪಿಸಿದ್ದಾರೆ.
ದೀಪಕ್ ಕಳೆದ ನಾಲ್ಕು ವರ್ಷದ ಹಿಂದೆ ಬೇರೆ ಕೋಮಿಗೆ ಸೇರಿದ ಪುಷ್ಪಾ ಅವರನ್ನು ಪ್ರೇಮ ವಿವಾಹವಾಗಿದ್ದರು. ಆದರೆ, ಮದುವೆಯಾಗಿ ನಾಲ್ಕು ವರ್ಷ ಸಂತೋಷವಾಗಿ ಇದ್ದರು. ನನ್ನ ತವರು ಮನೆಯರಿಗೂ ನಮಗೆ ಯಾವುದೇ ಸಂಬಂಧಿವಿಲ್ಲ ಎಂದು ಬರೆದುಕೊಟ್ಟಿದ್ದೆ. ತವರು ಮನೆಯವರು ನನ್ನ ತಂಟೆಗೆ ಬರುವುದಿಲ್ಲ ಎಂದು ಠಾಣೆಯಲ್ಲಿ ಸಹಿ ಕೊಟ್ಟಿದ್ದರು. ಆದರೇ ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಪುಷ್ಪಾ ಆರೋಪಿಸಿದ್ದಾರೆ.