ಹುಬ್ಬಳ್ಳಿ: ಜಿಲ್ಲೆಯ ಪಿಂಚಣಿ ಪಡೆಯುವರ ಗೋಳು ಹೇಳ ತೀರದಾಗಿದ್ದು, ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಫಲಾನುಭವಿಗಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೊರೊನಾ ನಡುವೆ ಹುಬ್ಬಳ್ಳಿ ಫಲಾನುಭವಿಗಳಿಗೆ ತಲುಪದ ಪಿಂಚಣಿ ಹಣ - Pension money
ಹುಬ್ಬಳ್ಳಿಯಲ್ಲಿ ಪಿಂಚಣಿ ಹಣ ಪಡೆಯಲು ಫಲಾನುಭವಿಗಳು ಸರ್ಕಾರಿ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಲುತ್ತಿದ್ದಾರೆ. ಹಲವು ತಿಂಗಳಿನಿಂದ ಪಿಂಚಣಿ ಪಡೆಯಲು ಫಲಾನುಭವಿಗಳು ಕಚೇರಿಗೆ ಅಲೆದಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಪಿಂಚಣಿ ಹಣ ಸಂದಾಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
![ಕೊರೊನಾ ನಡುವೆ ಹುಬ್ಬಳ್ಳಿ ಫಲಾನುಭವಿಗಳಿಗೆ ತಲುಪದ ಪಿಂಚಣಿ ಹಣ Hubballi people tired of lined for government office for pension money](https://etvbharatimages.akamaized.net/etvbharat/prod-images/768-512-7277224-992-7277224-1589978290514.jpg)
ಪಿಂಚಣಿ ಹಣಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸುಸ್ತಾದ ಹುಬ್ಬಳ್ಳಿ ಮಂದಿ
ನಗರದ ಮಿನಿ ವಿಧಾಸೌಧದಲ್ಲಿ ಪಿಂಚಣಿ ಹಣ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ಐದು ತಿಂಗಳಿನಿಂದ ಪಿಂಚಣಿ ಬರದಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ.
ಪಿಂಚಣಿ ಹಣಕ್ಕಾಗಿ ಸರ್ಕಾರಿ ಕಚೇರಿ ಮುಂದೆ ಸಾಲುಗಟ್ಟಿರು ಫಲಾನುಭವಿಗಳು
ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇವೆ. ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಬಂದರೂ ಯಾವುದಾರು ಒಂದು ಸಬೂಬು ಹೇಳುತ್ತಿದ್ದಾರೆ. ಸುಮಾರು ಐದಾರು ತಿಂಗಳಿನಿಂದ ಕಚೇರಿಗೆ ಅಲೆದಾಡುತ್ತಿದ್ದರೂ ಪಿಂಚಣಿ ಹಣ ಸರಿಯಾಗಿ ಸಂದಾಯವಾಗುತ್ತಿಲ್ಲ ಎಂದು ಪಿಂಚಣಿದಾರರು ದೂರುತ್ತಿದ್ದಾರೆ.