ಹುಬ್ಬಳ್ಳಿ: ಲಾಕ್ಡೌನ್ ಪಾಸ್ ಪಡೆಯಲು 5 ವರ್ಷಗಳ ಹಿಂದೆ ಮೃತಪಟ್ಟಿದ್ದ ತಂದೆಯ ಹೆಸರೇಳಿಕೊಂಡು ಕಾಂಗ್ರೆಸ್ ಎಂಎಲ್ಸಿ ಬಂಟನೊಬ್ಬ ಪಾಸ್ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಎಂಎಲ್ಸಿ ಬಲಗೈ ಬಂಟನಾಗಿರುವ ಸೋಮಲಿಂಗ ಯಲಿಗಾರ್ ಪಾಸ್ ದುರ್ಬಳಕೆ ಮಾಡಿಕೊಂಡಿರುವ ಆರೋಪಿ. ಸೋಮಲಿಂಗ ಯಲಿಗಾರ ತಮ್ಮ ತಂದೆ ಬೆಂಗಳೂರಿನಲ್ಲಿ ಮೃತಪಟ್ಟಿರುವುದಾಗಿ ಹೇಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಧಾರವಾಡ ಜಿಲ್ಲಾಡಳಿತದಿಂದ ಪಾಸ್ ಪಡೆದಿದ್ದಾರೆ. ಆದ್ರೆ 5 ವರ್ಷದ ಹಿಂದೆಯೇ ಇವರ ತಂದೆ ಮೃತಪಟ್ಟಿದ್ದಾರೆ.
ಅಲ್ಲದೇ ಪಾಸ್ ವಿತರಣೆ ವೇಳೆ ಜಿಲ್ಲಾಡಳಿತ ಬೆಂಗಳೂರಿನಿಂದ ಮರಳಿ ಬಾರದಂತೆ ಪ್ರಯಾಣಕ್ಕೆ ನಿರ್ಭಂದ ವಿಧಿಸಿ ವಿತರಣೆ ಮಾಡಿತ್ತು. ಆದ್ರೆ ಸ್ವತಃ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಸೋಮಲಿಂಗ ಪಾಸ್ ದುರ್ಬಳಕೆ ಮಾಡಿಕೊಂಡು ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಮಧ್ಯೆ ಮರಳಿ ಬರುವಾಗ ದಾವಣಗೆರೆ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದ್ದು, ಅವರಿಗೂ ಸಹ ಸುಳ್ಳು ಹೇಳಿ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎನ್ನಲಾಗ್ತಿದೆ.
ಈ ಕುರಿತು ಸೋಮಲಿಂಗ್ ಯಲಿಗಾರನನ್ನ ಪ್ರಶ್ನಿಸಿದ್ರೆ, ನಾನು ಪಾಸ್ ತಗೆದುಕೊಂಡಿದ್ದು ನಿಜ. ನಮ್ಮ ಮಾವನವರು ತೀರಿಕೊಂಡಿದ್ರು. ಹೀಗಾಗಿ ಐದು ಜನರ ಹೆಸರಿನಲ್ಲಿ ಪಾಸ್ ಪಡೆದಿದ್ದೆವು ಎನ್ನುತ್ತಾರೆ.
ಸದ್ಯ ಲಾಕ್ ಡೌನ್ ಮಧ್ಯೆ ರೋಡಿಗೆ ಇಳಿಯೋ ವಾಹನಗಳನ್ನ ಸೀಜ್ ಮಾಡೋ ಪೊಲೀಸರು ಪಾಸ್ ದುರ್ಬಳಕೆ ಮಾಡಿಕೊಂಡ ಪ್ರಭಾವಿ ವ್ಯಕ್ತಿಗಳಿಗೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.