ಕರ್ನಾಟಕ

karnataka

ETV Bharat / city

10, 20 ರೂಪಾಯಿ‌ಯ ನಾಣ್ಯಗಳ ಸ್ವೀಕಾರಕ್ಕೆ ಹೊಟೇಲ್​ ಮಾಲೀಕರು ಗ್ರೀನ್ ಸಿಗ್ನಲ್! - ಹುಬ್ಬಳ್ಳಿ ಸುದ್ದಿ

ಹುಬ್ಬಳ್ಳಿಯಲ್ಲಿ 10 ಮತ್ತು 20 ರೂಪಾಯಿ‌ ನಾಣ್ಯಗಳ ಸ್ವೀಕಾರಕ್ಕೆ ಹೋಟೆಲ್​​​ ಮಾಲೀಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ.

Hotels green signal for acceptance of coins, Hotels green signal for acceptance of coins in Hubli, Hubli news, Hubli hotel news, ನಾಣ್ಯ ಸ್ವೀಕಾರಕ್ಕೆ ಹೋಟೆಲ್ ಗ್ರೀನ್ ಸಿಗ್ನಲ್, ಹುಬ್ಬಳ್ಳಿಯಲ್ಲಿ ನಾಣ್ಯ ಸ್ವೀಕಾರಕ್ಕೆ ಹೋಟೆಲ್ ಗ್ರೀನ್ ಸಿಗ್ನಲ್, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ ಹೋಟೆಲ್ ಸುದ್ದಿ,
ನಾಣ್ಯಗಳ ಸ್ವೀಕಾರಕ್ಕೆ ಹೊಟೇಲ್​ ಮಾಲೀಕರು ಗ್ರೀನ್ ಸಿಗ್ನಲ್

By

Published : Jun 1, 2022, 1:14 PM IST

ಹುಬ್ಬಳ್ಳಿ: ಇಷ್ಟು ದಿನ ಸಾರ್ವಜನಿಕರಲ್ಲಿ ಹತ್ತು ರೂಪಾಯಿ ಹಾಗೂ ಇಪ್ಪತ್ತು ರೂಪಾಯಿ ನಾಣ್ಯಗಳ ಬಗ್ಗೆ ಒಂದು ಆತಂಕ ಇತ್ತು. ಆದರೆ ಹುಬ್ಬಳ್ಳಿಯ ಹೋಟೆಲ್​ ವರ್ತಕರು ಈ ಆತಂಕಕ್ಕೆ ಬ್ರೇಕ್ ಹಾಕಿದ್ದು, ಈಗ 10 ಮತ್ತು 20 ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಆಕ್ಷೇಪಣೆ ಇಲ್ಲದೇ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ.

ನಾಣ್ಯಗಳ ಸ್ವೀಕಾರಕ್ಕೆ ಹೊಟೇಲ್​ ಮಾಲೀಕರು ಗ್ರೀನ್ ಸಿಗ್ನಲ್

ಕೆಲವು ತಿಂಗಳು ಹಿಂದೆಯಷ್ಟೆ ಚಾಲ್ತಿಯಲ್ಲಿದ್ದ ಹತ್ತು ರೂಪಾಯಿ ನಾಣ್ಯ ಇತ್ತೀಚಿನ ದಿನಗಳಲ್ಲಿ ಚಲಾವಣೆಯೇ‌ ಕಾಣುತ್ತಿರಲಿಲ್ಲ. ಅಲ್ಲದೇ ಜನರು ಕೂಡ ಹತ್ತು ರೂಪಾಯಿ ನಾಣ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಹುಬ್ಬಳ್ಳಿಯ ಹೋಟೆಲ್​ ಉದ್ಯಮಿಗಳು ಈಗ ಹತ್ತು, ಇಪ್ಪತ್ತು ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಪಡೆಯುವ ಹಾಗೂ ಕೊಡುವ ಮೂಲಕ ಮತ್ತೊಮ್ಮೆ ನಾಣ್ಯ ಚಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ.

ಓದಿ:ಸತತ ಎಂಟು ವರ್ಷ ನಾಣ್ಯ ಸಂಗ್ರಹ.. ತನ್ನಿಷ್ಟದಂತೆ ಚಿಲ್ಲರೇ ದುಡ್ಡಲ್ಲೇ ಸ್ಕೂಟರ್​ ಖರೀದಿಸಿದ ಭೂಪ!

ಹುಬ್ಬಳ್ಳಿಯ ಬಹುತೇಕ ಹೊಟೇಲ್​ಗಳಲ್ಲಿ ಕಳೆದ ಎರಡು ದಿನಗಳಿಂದ ಸೂಚನಾ ಫಲಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. 10 ಮತ್ತು 20 ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಸ್ವೀಕರಿಸಲಾಗುವುದು ಎಂದು ಸಾರ್ವಜನಿಕರಿಗೆ ಮಾಹಿತಿ ರವಾನೆ ಮಾಡುವ ಮೂಲಕ ಸಾರ್ವಜನಿಕರ ಆತಂಕವನ್ನು ದೂರ ಮಾಡಿದ್ದಾರೆ. ಈಗಾಗಲೇ ಸ್ಟೇಷನ್ ರಸ್ತೆಯಲ್ಲಿರುವ ಹಾಗೂ ನೀಲಿಜನ್ ರಸ್ತೆಯಲ್ಲಿರುವ ಬಹುತೇಕ ಹೋಟೆಲ್​​​​ಗಳಲ್ಲಿ ಹತ್ತು, ಇಪ್ಪತ್ತು ರೂಪಾಯಿ ಮುಖ ಬೆಲೆಯ ನಾಣ್ಯಗಳ ಚಲಾವಣೆಗೆ ನಾಂದಿ ಹಾಡಿದ್ದಾರೆ.

For All Latest Updates

ABOUT THE AUTHOR

...view details