ಕರ್ನಾಟಕ

karnataka

ETV Bharat / city

ಲಾಕ್​ಡೌನ್​ ಉಲ್ಲಂಘನೆ: ಹೋಟೆಲ್​ಗಳ ಮೇಲೆ​ ಅಧಿಕಾರಿಗಳ ದಾಳಿ - Hotel Siege Health Officers

ಲಾಕ್​​​ಡೌನ್ ಉಲ್ಲಂಘಿಸಿ ಪಾರ್ಸಲ್ ಹಾಗೂ ಸರ್ವೀಸ್ ನೀಡುತ್ತಿದ್ದ ಹೋಟೆಲ್​ ಮೇಲೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದರು.

Hotel Siege Health Officers
ಹೋಟೆಲ್​ ಸೀಜ್​ ಮಾಡಿದ ಅಧಿಕಾರಿಗಳು

By

Published : Apr 6, 2020, 7:17 PM IST

ಹುಬ್ಬಳ್ಳಿ: ಲಾಕ್​​​ಡೌನ್ ಆದೇಶ ಉಲ್ಲಂಘಿಸಿ ನಿಗದಿತ ವೇಳೆ ಹೊರತುಪಡಿಸಿ ವ್ಯಾಪಾರ ಮಾಡುತ್ತಿದ್ದ ಹೋಟೆಲ್​​​ಗಳ ಮೇಲೆ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು, ಹೋಟೆಲ್​​​ಗಳಿಗೆ ಬೀಗ ಮುದ್ರೆ ಹಾಕಿಸಿದ್ದಾರೆ.

ಹುಬ್ಬಳ್ಳಿಯ ಆಲ್ ತಾಜ್, ಶ್ರೀವೈಭವ್ ಸೇರಿದಂತೆ ಮೂರು ಹೋಟೆಲ್​​ಗಳ ಮೇಲೆ ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದರ್ ನೈತೃತ್ವದಲ್ಲಿ ದಾಳಿ ನಡೆಸಲಾಗಿದೆ. ಲಾಕ್​​​ಡೌನ್ ಆದೇಶ ಉಲ್ಲಂಘಿಸಿ ಪಾರ್ಸಲ್ ಹಾಗೂ ಸರ್ವೀಸ್ ನೀಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.

ABOUT THE AUTHOR

...view details