ಹುಬ್ಬಳ್ಳಿ :ಮದುವೆ ಸಮಾರಂಭಗಳಲ್ಲಿ ಮದುಮಗನನ್ನು ಹೊತ್ತು ಮೆರವಣಿಗೆ ಮಾಡುವ ಕುದುರೆಯೊಂದು ಅವೈಜ್ಞಾನಿಕ ಕಾಮಗಾರಿಯಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊಸ ಕೋರ್ಟ್ ಸಮೀಪದ ಗಣೇಶ ಪಾರ್ಕ್ ಬಳಿ ನಡೆದಿದೆ.
ಅವೈಜ್ಞಾನಿಕ ಕಾಮಗಾರಿಯಿಂದ ಮೂಕ ಪ್ರಾಣಿಯ ಜೀವಕ್ಕೆ ಆಪತ್ತು ನಗರದ ಶಿರೂರ್ ಪಾರ್ಕ್ ಬಳಿಯ ಮದುವೆಯೊಂದರ ಮೆರವಣಿಗೆಂದು ಹೋಗಿದ್ದ ಕುದುರೆ ಕಟ್ಟಿದ ಹಗ್ಗ ಕತ್ತರಿಸಿಕೊಂಡು ಬಂದು ಚರಂಡಿಯಲ್ಲಿ ಬಿದ್ದಿದೆ. ಚರಂಡಿಗೆ ಅಳವಡಿಸಿದ ರಾಡ್ಗೆ ಸಿಲುಕಿ ನರಳುತ್ತಿದ್ದ ಕುದುರೆ ನೋಡಿದ ನಿತೇಶ್ ರಟಗಲ್, ವೈಭವ್ ಜೈನ್ ಎಂಬುವರು ಕುದುರೆ ರಕ್ಷಣೆ ಮಾಡಿದ್ದಾರೆ.
ಕಾಲು, ಎದೆ ಭಾಗಕ್ಕೆ ನಾಟಿದ ಕಬ್ಬಿಣದ ರಾಡ್ಗಳಿಂದ ಕುದುರೆಯ ಮಾಂಸಖಂಡ ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾಗಿವೆ. ಸಮಾಜ ಸೇವಕ ರಾಹುಲ್ ಗೋಮ್ಸ್ ಕುದುರೆಗೆ ಚಿಕಿತ್ಸೆ ನೀಡಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಈ ಘಟನೆ ನಡೆದಿದೆ. ಜೊತೆಗೆ ಕುದುರೆ ಓಡಾಡಬಾರದೆಂದು ಕಣ್ಣು ಕಟ್ಟಲಾಗಿತ್ತು. ಇದು ಕೂಡ ಅವಘಡಕ್ಕೆ ಕಾರಣ ಎಂದು ರಕ್ಷಣೆ ಮಾಡಿದ ನಿತೇಶ್ ರಟಗಲ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೈಕೊಟ್ಟ ಗಣಿಗಾರಿಕೆ ಉದ್ಯಮ.. ಹಿರೇಕಾಯಿ ಬೆಳೆದು ಹಿಗ್ಗಿದ ಸಹೋದರರು..