ಧಾರವಾಡ: ಕೆಲ ದಿನಗಳ ಹಿಂದಷ್ಟೇ ಹಳೆ ಕಟ್ಟಡದಿಂದ ಮುಕ್ತವಾಗಿರುವ ಧಾರವಾಡದ ರೈಲ್ವೆ ನಿಲ್ದಾಣಕ್ಕೆ ಇದೀಗ ಹೈಟೆಕ್ ಟಚ್ ಸಿಕ್ಕಿದ್ದು, ರೈಲ್ವೆ ನಿಲ್ದಾಣದಲ್ಲಿನ ಅಂದವಾದ ಚಿತ್ರಗಳು ಜನರನ್ನು ಆಕರ್ಷಿಸುತ್ತಿವೆ.
ಒಂದು ಕಾಲದಲ್ಲಿ ಧಾರವಾಡ ರೈಲು ನಿಲ್ದಾಣಕ್ಕೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಇದೀಗ ಎಲ್ಲವೂ ಬದಲಾಗಿದ್ದು, ನಿಲ್ದಾಣದ ಹೊರಭಾಗದಲ್ಲಿನ ವಾಲ್ ಗಾರ್ಡನ್ ಪ್ರಯಾಣಿಕರನ್ನು ಆಕರ್ಷಿಸುತ್ತಿದೆ.
ಭರತನಾಟ್ಯ, ಯಕ್ಷಗಾನ, ಕಥಕಳಿ ಸೇರಿದಂತೆ ದಕ್ಷಿಣ ಭಾರತದ ವಿವಿಧ ನೃತ್ಯ ಪ್ರಕಾರಗಳ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದ್ದು, ಇವೆಲ್ಲವೂ ರೈಲ್ವೆ ನಿಲ್ದಾಣದ ಅಂದವನ್ನು ದ್ವಿಗುಣಗೊಳಿಸಿವೆ. ನಿಲ್ದಾಣದ ಬುಕ್ಕಿಂಗ್ ಆಫೀಸ್ನ ಹೊರಭಾಗದಲ್ಲಿ ರವೀಂದ್ರನಾಥ ಠಾಗೋರ್ ಅವರ ಮೂರ್ತಿ ಕೆತ್ತನೆ ಮಾಡಲಾಗುತ್ತಿದೆ.