ಕರ್ನಾಟಕ

karnataka

ETV Bharat / city

ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸೋ ಬಗ್ಗೆ ಹೈಕಮಾಂಡ್​​​ ನಿರ್ಧಾರ ಕೈಗೊಳ್ಳುತ್ತೆ: ಶೆಟ್ಟರ್​​​​ - Shetter

ರಾಜ್ಯದಲ್ಲಿ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ‌. ಸುಪ್ರೀಂ ಕೋರ್ಟ್​ನಲ್ಲಿ ಸೋಮವಾರ ಅವರ ಪ್ರಕರಣ ನಡೆಯುತ್ತೆ‌‌. ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳುತ್ತೆ ಎಂದು ನೋಡೋಣ. ಬಳಿಕ ಅವರು ಉಪ ಚುನಾವಣೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್​ ನಿರ್ಧಾರ ಕೈಗೊಳ್ಳುತ್ತದೆ ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ಜಗದೀಶ್​ ಶೆಟ್ಟರ್

By

Published : Sep 22, 2019, 2:55 AM IST

ಹುಬ್ಬಳ್ಳಿ: ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್​ ನಿರ್ಧಾರ ಕೈಗೊಳ್ಳುತ್ತದೆ ಎಂದು ಬೃಹತ್ ಹಾಗೂ‌ ಮಧ್ಯಮ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ‌. ಸುಪ್ರೀಂ ಕೋರ್ಟ್​ನಲ್ಲಿ ಸೋಮವಾರ ಅವರ ಪ್ರಕರಣ ನಡೆಯುತ್ತೆ‌‌. ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳುತ್ತೆ ನೋಡೋಣ ಎಂದರು.

ಜಗದೀಶ್​ ಶೆಟ್ಟರ್. ಸಚಿವ

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಥಣಿಯಿಂದ ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧಿಸುತ್ತಾರೋ ಇಲ್ಲವೋ ಎನ್ನುವುದನ್ನ ಕಾದು ನೋಡಿ ಎಂದರು.

ನನ್ನ ಪ್ರಕಾರ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿ ಆಂತಕ ಇಲ್ಲ. ಚುನಾವಣೆ ಘೋಷಣೆಯಿಂದ ನೆರೆ ಪರಿಹಾರ ಕಾಮಗಾರಿಗೂ ಯಾವುದೇ ತೊಂದರೆಯಾಗಲ್ಲ. ಜಿಲ್ಲಾಡಳಿತ ಎಲ್ಲವೂ ಅಚ್ಚುಕಟ್ಟಾಗಿ ನಿಭಾಯಿಸುತ್ತದೆ ಎಂದು ಭರವಸೆ ನೀಡಿದರು.

ABOUT THE AUTHOR

...view details